“ನಮ್ಮ ಕುಂದಾಪುರ” ಬಳಗದ 26ನೇ ಸ್ನೇಹ ಸಹಮಿಲನ

“ನಮ್ಮ ಕುಂದಾಪುರ” ಬಳಗದ 26ನೇ ಸಹಮಿಲನವು ಕುಂದಾಪುರ ಹೋಟೆಲ್‍ನ ನಗು ಪ್ಯಾಲೇಸ್ ನಲ್ಲಿ ಅದ್ದೂರಿಯಾಗಿ ನಡೆಯಿತು.

ಖ್ಯಾತ ವಕೀಲರೂ, ಸಾಹಿತಿ, ಸಂಪನ್ಮೂಲವ್ಯಕ್ತಿಗಳಾಗಿರುವ ಎ .ಎಸ್. ಎನ್ ಹೆಬ್ಬಾರ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ ಒಂದು ಹೂವಿನ ಚಿತ್ರವನ್ನು ಬಳಗದ ಗೋಡೆಯ ಮೇಲೆ ಹಾಕಿದರೆ ಸಾವಿರಾರು ಸದಸ್ಯರು ಕ್ಷಣಮಾತ್ರದಲ್ಲಿ ತಮ್ಮದೇ ಆದ ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಪರಿ ಅನನ್ಯವಾದುದು,ವಿಶ್ವಾದ್ಯಂತ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ “ನಮ್ಮಕುಂದಾಪುರ” ಸಾಮಾಜಿಕ ಜಾಲತಾಣ ನಮಗೆಲ್ಲ ಹೆಮ್ಮ ಎಂದರು.

ಬಳಗದ ನೇತಾರ ರಾಧಾಕೃಷ್ಣ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸರಿಸುಮಾರು ಎರಡುವರೆ ಲಕ್ಷ ಸದಸ್ಯರ ಶಿಸ್ತು ಬದ್ಧ ನಡವಳಿಕೆಗಳ ಕುರಿತು ಗುಣಗಾನ ಮಾಡಿ ತಮ್ಮ ಒಡಲಾಳದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಕೆ.ಪುಂಡಲೀಕ ನಾಯಕ್,ನಿವೃತ್ತ ಅಧ್ಯಾಪಕರಾದ ಶ್ರೀನಿವಾಸ ಸೋಮಯಾಜಿ, ಅನುಸೂಯಾ ಭಟ್ ನಿವೃತ್ತ ಬ್ಯಾಂಕ್ ಅಧಿಕಾರಿ ಕೋಡಿ ಚಂದ್ರಶೇಖರ ನಾವಡರು, ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಜಗದೀಶ್ ಉಪ್ಪುಂದ ಮತ್ತು ಮಂಜುನಾಥ ಮರವಂತೆಯವರ ನೇತ್ರತ್ವದಲ್ಲಿ ಕನ್ನಡ ತುಳು ಸಾಹಿತ್ಯ ಬಳಗದ ವತಿಯಿಂದ ರಾಧಾಕೃಷ್ಣ ಶೆಟ್ಟಿ ಯವರಿಗೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತಲ್ಲೂರು ನಾರಾಯಣ ಶೆಟ್ಟಿ, ಲಲಿತಾ ವಾರಂಬಳ್ಳಿ, ಬಿ.ಎಚ್ ಗಿರಿಧರ ಶೆಟ್ಟಿ,ಮಾಜಿ ರಾಷ್ಟ್ರ ಪತಿ ಡಾ.ಅಬ್ದುಲ್ ಕಲಾಮ್ ಅವರ ಒಡನಾಡಿಯಾಗಿದ್ದ ವಿಜ್ಞಾನಿ ಕರುಣಾಕರ ನಮ್ಮ ಕುಂದಾಪುರದ ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಪೂರ್ಣಿಮಾ ಕಮಲಶಿಲೆ ಪ್ರಾರ್ಥಿಸಿದರು.ಪುಂಡಲೀಕ ಪೂಜಾರಿ ಆಜ್ರಿ ಸ್ವಾಗತಿಸಿದರು
ಜೆ.ಪಿ.ಬಡಾಕೆರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Posts

Leave a Reply

Your email address will not be published.