ನಂದಾವರ ದೇವಳಕ್ಕೆ ನೂತನ ರಜತ ಪಲ್ಲಕಿ ಹಾಗೂ ಪೀಠ ಪ್ರಭಾವಳಿ ಸಮರ್ಪಣೆ

ನಂದಾವರ ದೇವಳಕ್ಕೆ ನೂತನ ರಜತ ಪಲ್ಲಕಿ ಹಾಗೂ ಪೀಠ ಪ್ರಭಾವಳಿ ಸಮರ್ಪಣೆ ನಂದಾವರ ಶ್ರೀ ವೀರ ಮಾರುತಿ ದೇವಸ್ಥಾನ ದ ಶ್ರೀ ದೇವರ ಉತ್ಸವಾದಿ ಕಾರ್ಯಕ್ರಮಗಳಿಗಾಗಿ ನೂತನವಾಗಿ ನಿರ್ಮಿಸಲಾದ ರಜತ ಪಲ್ಲಕಿ ಹಾಗೂ ಶ್ರೀ ದೇವರ ರಜತ ಪೀಠ ಪ್ರಭಾವಳಿಗಳನ್ನು ಶ್ರೀದೇವರಿಗೆ ಹತ್ತು ಸಮಸ್ತರ ಪರವಾಗಿ ಶ್ರೀ ದೇವರಿಗೆ ಸಮರ್ಪಿಸಲಾಯಿತು . ಸುಮಾರು 28ಕಿಲೋ ಬೆಳ್ಳಿಯನ್ನು ಬಳಸಲಾಗಿದ್ದು , 25 ಲಕ್ಷ ವೆಚ್ಚ ತಗಲಿದ್ದು ಶ್ರೀದೇವಳದ ವೈದಿಕರಿಂದ ವಿಧಿ ವಿಧಾನಪೂರ್ವಕ ಪೂಜೆನಡೆದು ಸಮರ್ಪಿಸಲಾಯಿತು . ಈ ಸಂದರ್ಭದಲ್ಲಿ ಶ್ರೀದೇವಳದ ಆಡಳಿತ ಮೊಕ್ತೇಸರರಾದ ಡಾ. ಪಿ . ಉಮಾನಂದ ಮಲ್ಯ , ನಂದಾವರ ಉಮೇಶ್ ಭಟ್ , ಹನುಮಂತ್ ಭಟ್ , ವೆಂಕಟೇಶ್ ಮಲ್ಯ , ಲಕ್ಷ್ಮೀನಾರಾಯಣ ಮಲ್ಯ , ಶ್ರೀನಿವಾಸ್ ಕುಡ್ವ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು 

Related Posts

Leave a Reply

Your email address will not be published.