ಕರ್ನಾಟಕ ರಾಜ್ಯ ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಸ್ಥಾಪನೆಗೆ ಮುಖ್ಯಮಂತ್ರಿ ಒಪ್ಪಿಗೆ

ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿವರು ಸಮಾಜದ ಪ್ರಮುಖರ ಸಭೆಯಲ್ಲಿ ನಿಗಮ ಸ್ಥಾಪಿಸಿ ಮುಂದಿನ ಬಜೆಟ್ ನಲ್ಲಿ ಅನುದಾನ ನೀಡುವುದಾಗಿ ಘೋಷಣೆ ಮಾಡಿದರು. ಬಿಜೆಪಿ ರಾಜ್ಯಧ್ಯಕ್ಷರಾದ ನಳಿನ ಕುಮಾರ್ ಕಟೀಲು, ಸಚಿವರಾದ ಸುನಿಲ್ ಕುಮಾರ್,ಸೋಲೂರು ಮಠದ ಸ್ವಾಮಿಜೀ ಶ್ರೀ ವಿಖ್ಯಾತನಂದರು, ಸಮಾಜದ ಸ್ವಾಮಿಗಳಾದ ರೇಣುಕಾನಂದರು, ಶಾಸಕರಾದ ಉಮಾನಾಥ ಕೋಟಾನ್ , ಸುನಿಲ್ ನಾಯಕ್, ಹರತಾಳು ಹಾಲಪ, ರಘುಪತಿ ಭಟ್, ನವೀನ್ ಚಂದ್ರ ಸುವರ್ಣ, ಲಾಲಜಿ ಮೆಂಡನ್, ಕೆ.ಟಿ ಸುವರ್ಣ, ಚಂದ್ರ ಶೇಖರ ಉಚ್ಚಿಲ, ಆರ್ ಸಿ ನಾರಾಯಣ ರೆಂಜ ಉಪಸ್ಥಿತರಿದ್ದರು.
