ರಾಷ್ಟ್ರಪ್ರಶಸ್ತಿ ವಿಜೇತ ರಂಗಕರ್ಮಿ ಸದಾನಂದ ಸುವರ್ಣ ನಿಧನ
ರಂಗ ಕರ್ಮಿ, ನಾಟಕಕಾರ, ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ತಯಾರಕ, ನಿರ್ದೇಶಕ ಸದಾನಂದ ಸುವರ್ಣ ಅವರು ಮಂಗಳೂರಿನ ಕಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
ಅವರಿಗೆ 93 ವರುಷ ವಯಸ್ಸಾಗಿತ್ತು. ಮುಂಬಯಿಯಲ್ಲಿ ತುಳು ಕನ್ನಡ ನಾಟಕಕಾರ ನಟರಾಗಿ ಖ್ಯಾತಿ ಗಳಿಸಿದ್ದ ಸದಾನಂದ ಸುವರ್ಣ ಅವರು ಕಳೆದ ಕಾಲು ಶತಮಾನದಿಂದ ಮಂಗಳೂರು ನಿವಾಸಿಯಾಗಿದ್ದರು. ಕುಬಿ ಮತ್ತು ಇಯಾಲ, ಘಟಶ್ರಾದ್ಧ ಮಾದರಿಯ ಸದಭಿರುಚಿಯ ಚಿತ್ರ ನಿರ್ಮಿಸಿದ್ದರು. ಅವರ ಗುಡ್ಡೆದ ಭೂತ ಟೀವಿ ಧಾರಾವಾಹಿಯಾಗಿ ಖ್ಯಾತಿ ಗಳಿಸಿತ್ತು. ನಾರಾಯಣ ಗುರು ಮೊದಲಾದ ಸಾಕ್ಷ್ಯಚಿತ್ರ ನಿರ್ಮಿಸಿದ್ದರು.
ಮೂಲ್ಕಿ ಮೂಲದ ಸದಾನಂದ ಸುವರ್ಣರು ಮುಂಬಯಿಯಲ್ಲಿ ಓದಿ ಬರೆದು ಖ್ಯಾತಿ ಗಳಿಸಿದವರು. ಬುಧವಾರ ಮಂಗಳೂರಿನ ಪುರ ಭವನದಲ್ಲಿ ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಇಡಲಾಗುತ್ತಿದೆ. ಅವರ ಆಶಯದಂತೆ ದೇಹದಾನ ಮಾಡಲಾಗಿದೆ.