ಸೂರಿಕುಮೇರು ಚರ್ಚ್‌ಗೆ ನೂತನ ಧರ್ಮಗುರುವಾಗಿ ನವೀನ್ ಪ್ರಕಾಶ್ ಡಿಸೋಜ ಅಧಿಕಾರ ಸ್ವೀಕಾರ

ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರು ಬೊರಿಮಾರ್ ಸೈಂಟ್ ಜೋಸೆಫ್ ಧರ್ಮಕೇಂದ್ರಕ್ಕೆ ೨೬ ನೇ ನೂತನ ಧರ್ಮಗುರು ಆಗಿ ವಂದನೀಯ ನವೀನ್ ಪ್ರಕಾಶ್ ಡಿಸೋಜರವರು ಬಿಷಪ್ ಪ್ರತಿನಿಧಿಯಾಗಿ ಆಗಮಿಸಿದ ವಿಟ್ಲ ವಲಯದ ಶ್ರೇಷ್ಟ ಗುರು ಅತೀ ವಂದನೀಯ ಐವನ್ ಮೈಕಲ್ ರೊಡ್ರಿಗಸ್ ರವರಿಂದ ಅಧಿಕಾರ ಸ್ವೀಕರಿಸಿದರು.

ಕಿನ್ನಿಗೋಳಿ ಧರ್ಮಕೇಂದ್ರದಲ್ಲಿ ಹುಟ್ಟಿ ಬೆಳೆದ ಇವರು 2005ನೇ ವರ್ಷದಲ್ಲಿ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಇವರಿಂದ ಗುರುದೀಕ್ಷೆಯನ್ನು ಪಡೆದು, ವಿಟ್ಲ, ಬಿಜೈ ಚರ್ಚ್ ಗಳಲ್ಲಿ ಸಹಾಯಕ ಧರ್ಮಗುರು ಹಾಗೂ ಕಾಸರಗೋಡು, ತಾಕೊಡೆ ಮತ್ತು ಬಾಂಬಿಲ್ ಚರ್ಚ್ ಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಇದೀಗ ಸೂರಿಕುಮೇರು ಬೊರಿಮಾರ್ ಧರ್ಮಕೇಂದ್ರದ ಧರ್ಮಗುರುಗಳಾಗಿ ಅಧಿಕಾರ ಸ್ವೀಕರಿಸಿದರು.

ಈ ಶುಭ ವೇಳೆಯಲ್ಲಿ ಬಂಟ್ವಾಳ ಮತ್ತು ವಿಟ್ಲ ವಲಯದ ಧರ್ಮಗುರುಗಳು, ಸೂರಿಕುಮೇರು ಚರ್ಚ್ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್, ಆಯೋಗಗಳ ಸಂಯೋಜಕ ಎಲಿಯಾಸ್ ಪಿರೇರಾ, ಬಾಂಬಿಲ್ ಹಾಗೂ ಸೂರಿಕುಮೇರು ಚರ್ಚ್ ನ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.