ಕೆ.ಎಸ್. ಹೆಗ್ಡೆ ಮಾದಕ ದ್ರವ್ಯ ಸೇವನೆ, ಅಕ್ರಮ ಸಾಗಾಟದ ವಿರುದ್ಧ ಜಾಗೃತಿ

ದೇರಳಕಟ್ಟೆ: ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಅಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗ ಮತ್ತು ಆಳ್ವಾಸ್ ಕಾಲೇಜಿನ ಪದವಿ ಕಾಲೇಜಿನ ಸಮಾಜಕಾರ್ಯ ವಿಭಾಗದ ಆಶ್ರಯದಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಟದ ವಿರುದ್ದ ಅಂತರಾಷ್ಟ್ರೀಯ ದಿನಾಚರಣೆಯ ಮತ್ತು ಜಾಗೃತಿ ಕಾರ್ಯಕ್ರಮ ಅಸ್ಪತ್ರೆ ಗ್ಲಾಸ್ ಹೌಸ್ ನಲ್ಲಿ ನಡೆಯಿತು.ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ಪದವಿ ವಿಭಾಗದ ಮುಖ್ಯಸ್ಥ ಡಾ.ಮಧುಮಾಲ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಟದ ವಿರುದ್ದ ಅಂತರಾಷ್ಟ್ರೀಯ ದಿನಾಚರಣೆಯಗೆ ಚಾಲನೆ ನೀಡಿದರು.

ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮೆಡಿಕಲ್ ಸುಪರಿಡೆಂಟ್ ಪೆÇ್ರ.ಸುಮಲತಾ ಆರ್.ಶೆಟ್ಟಿ ಭಾಗವಹಿಸಿ ಮಾತನಾಡಿ
ಮಾದಕ ವ್ಯಸನದ ಮಾರಕಗಳ ಬಗ್ಗೆ ಗೊತ್ತಿದ್ದೂ ಯುವಜನತೆ ಇಂದು ಅದರ ದಾಸರಾಗುತ್ತಿರುವುದು ವಿಪರ್ಯಾಸ. ಗೆಳೆತನದಿಂದ ಇಂತಹ ಹವ್ಯಾಸಗಳು ಆರಂಭಗೊಂಡು ಆರೋಗ್ಯ , ನಮ್ಮ ಬದುಕನ್ನೇ ಕಳೆದುಕೊಳ್ಳುವಂತಾಗುತ್ತದೆ. ಇಂತಹ ಬೀದಿ ನಾಟಕಗಳ ಮೂಲಕ ಮಾದಕ ವ್ಯಸನದ ಅಪಾಯಗಳ ಬಗ್ಗೆ ಅರಿವು ಮೂಡಿಸಿ ಸಾಮಾಜಿಕ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷೇಮ ಮಾನಸಿಕ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಭಟ್, ಪ್ರಾಧ್ಯಾಪಕ ಡಾ.ಸತೀಶ್ ರಾವ್ ಡಾ.ಜೋನಾಥನ್. ಆಗ್ನಿತಾ ಐಮನ್ ಸುಮನ್ ಪಿಂಟೋ ಉಪಸ್ಥಿತರಿದರು.ಕಾರ್ಯಕ್ರಮದ ಅಂಗವಾಗಿ ಕೆ.ಎಸ್.ಹೆಗ್ಡೆ ಆಸ್ಪತ್ರೆ, ಮಂಗಳೂರಿನ ಕೆ.ಎಸ್.ಆರ್ ಟಿಸಿ ಬಸ್ ನಿಲ್ದಾಣ, ಸಿಟಿ ಸೆಂಟರ್ ಮಾಲ್ ಮೊದಲಾದೆಡೆ ಬೀದಿ ನಾಟಕ ಪ್ರದರ್ಶನ ನಡೆಯಿತು.