Home Posts tagged #Deralakatte

ದೇರಳಕಟ್ಟೆ : ದೇಶದ ಮೊದಲ ಕೇಶ ವಿನ್ಯಾಸ ಕಾಲೇಜು – “ಶಿವಾಸ್” ಆಗಸ್ಟ್ ನಲ್ಲಿ ಕಾರ್ಯಾರಂಭ

ಮಂಗಳೂರು ವಿಶ್ವವಿದ್ಯಾನಿಲಯದಿಂದ ಅಂಗೀಕೃತವಾದ ದೇಶದ ಮೊತ್ತ ಮೊದಲ ಕೇಶ ವಿನ್ಯಾಸ ಕಾಲೇಜು ಆಗಸ್ಟ್ ನಲ್ಲಿ ಮಂಗಳೂರಿನ ದೇರಳಕಟ್ಟೆಯಲ್ಲಿ ಶಿವಾ’ಸ್ ಕಾಲೇಜು ಹೆಸರಲ್ಲಿ ಕಾರ್ಯಾರಂಭಗೊಳ್ಳಲಿದೆ. ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಮತ್ತು ಒಂದು ವರ್ಷದ ಡಿಪ್ಲೋಮಾ ಪೂರೈಸಿದ ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯ ಪ್ರಮಾಣೀಕೃತ ಸರ್ಟಿಫಿಕೇಟ್ ಸಿಗಲಿದೆ.

ಮಾ. 1ರಿಂದ ಮಾ.5ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಬೆಳ್ಮ ಉತ್ಸವ

ಗ್ರಾಮದಲ್ಲಿ ಸೌಹಾರ್ಧಯುತ ವಾತಾವರಣದೊಂದಿಗೆ ನಮ್ಮ ಸಂಸ್ಕøತಿ, ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ನಿಟ್ಟಿನಲ್ಲಿ ಗ್ರಾಮೋತ್ಸವಗಳು ಪೂರಕವಾಗಿದ್ದು, ಬೆಳ್ಮ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಎಲ್ಲ ಸಂಘ ಸಂಸ್ಥೆಗಳು, ಎಲ್ಲಾ ಧರ್ಮದ ಸಂಘಟನೆಗಳನ್ನು, ಪಕ್ಷದ ಮುಖಂಡರನ್ನು ಒಟ್ಟು ಸೇರಿಸಿ ಐದು ದಿನಗಳ ಕಾಲ ನಡೆಸುವ ಬೆಳ್ಮ ಉತ್ಸವ ಕಾರ್ಯಕ್ರಮ ಇತರ ಗ್ರಾಮಗಳಿಗೆ ಮಾದರಿ ಕಾರ್ಯಕ್ರಮವಾಗಲಿದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್

ನಿಟ್ಟೆ ಕ್ಷೇಮದಲ್ಲಿ ಅಂತಾರಾಷ್ಟ್ರೀಯ ಇಥೋಸ್ -5.0 ಸಮ್ಮೇಳನಕ್ಕೆ ಚಾಲನೆ

ಉಳ್ಳಾಲ:  ಮಾನವೀಕರಣದ ಸಂಕೇತದಲ್ಲಿ ಎಲ್ಲರೂ  ಬದುಕಬೇಕಿದೆ. ಸಹಿಷ್ಣುತೆ, ಗೌರವ ಮತ್ತು  ವಿನಾಯಿತಿ ನಾಗರೀಕತೆಯ ಲಕ್ಷಣಗಳಾಗಿರಬೇಕು. ವಿಶ್ವ ನೀತಿಶಾಸ್ತ್ರ, ನೈತಿಕತೆ ಹಾಗೂ ಮೌಲ್ಯಗಳನ್ನು ಒಳಗೊಂಡಿರುವುದರಿಂದ ಮನುಷ್ಯ ಎಲ್ಲಿಯೂ ಬದುಕಲು ಸಾಧ್ಯವುಳ್ಳ ವಾತಾವರಣವಿದೆ. ಇಲ್ಲವಾದಲ್ಲಿ ವಿಶ್ವವೇ ಭಯಾನಕವಾಗುತಿತ್ತು ಎಂದು  ಡಾ.ಬಿ.ಸಿ.ರಾಯ್ ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ.ವೇದಪ್ರಕಾಶ್ ಮಿಷ್ರಾ  ಅಭಿಪ್ರಾಯಪಟ್ಟರು. ಅವರು ನಿಟ್ಟೆ

ಉಳ್ಳಾಲ : ಬಸ್ ಕ್ಲೀನರ್ ನಿಂದ ವೈದ್ಯೆಯೊಂದಿಗೆ ಅಸಭ್ಯ ವರ್ತನೆ

ಉಳ್ಳಾಲ: ಬೆಂಗಳೂರು ನಿಂದ ಮಂಗಳೂರಿಗೆ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕೆಗೆ ಬಸ್ ಕ್ಲೀನರ್ ವೊಬ್ಬ ಪ್ಯಾಂಟ್ ನ ಜಿಪ್ ಓಪನ್ ಮಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ. ಘಟನೆ ವಿವರ: ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯ ದಲ್ಲಿರುವ ಮಹಿಳಾ ವೈದ್ಯೆಯೊಬ್ಬರು ಬೆಂಗಳೂರಿನಿಂದ ಮಂಗಳೂರಿಗೆ ಐಡಿಯಲ್ (KA51 AB 3649) ಬಸ್‌ನಲ್ಲಿ ಪ್ರಯಾಣ

ದೇರಳಕಟ್ಟೆ :ಕಣಚೂರು ಸಂಸ್ಥೆಯೊoದಿಗೆ ಮೆಡ್ ಪಾರ್ಲಿಮೆಂಟ್ ಆರೋಗ್ಯ ರಕ್ಷಣೆ ಒಡಂಬಡಿಕೆ

ದೇರಳಕಟ್ಟೆ: ವೈದ್ಯಕೀಯ ಕ್ಷೇತ್ರ ಸೇರಿದಂತೆ ನರ್ಸಿಂಗ್, ಫಿಸಿಯೋಥೆರಪಿ, ಅಲೈಡ್ ಸೈನ್ಸ್ನ ಶಿಕ್ಷಣದೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನದೊAದಿಗೆ ಆರೋಗ್ಯ ರಕ್ಷಣೆಗೆ ಬೇಕಾದ ಕೌಶಲ್ಯ ವೃದ್ಧಿ ಇಂದಿನ ಅಗತ್ಯಗಳಲ್ಲಿ ಒಂದಾಗಿದ್ದು, ಶಿಕ್ಷಣದೊಂದಿಗೆ ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ, ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಮೆಡ್ ಅಚೀವರ್ಸ್ ಗ್ರೂಪ್ ಆಫ್ ಕಂಪೆನಿಯ ಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಡಾ| ಹರ್ಷ ವರ್ದನ್

ಉಳ್ಳಾಲ : 2ನೆ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಡ್ವಕೇಟ್ ಬಿ.ಎ. ಮುಹಮ್ಮದ್ ಹನೀಫ್ ಆಯ್ಕೆ

ದೇರಳಕಟ್ಟೆ, : ಮೇಲ್ತೆನೆ (ಬ್ಯಾರಿ ಲೇಖಕರು ಮತ್ತು ಕಲಾವಿದರ ಕೂಟ)ಯ ವತಿಯಿಂದ ದೇರಳಕಟ್ಟೆಯ ‘ಕಣಚೂರು ಪಬ್ಲಿಕ್ ಸ್ಕೂಲ್’ ಕ್ಯಾಂಪಸ್‌ನಲ್ಲಿ ಅಕ್ಟೋಬರ್ 15ರಂದು ನಡೆಯುವ ಉಳ್ಳಾಲ ತಾಲೂಕು 2ನೆ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಲೇಖಕ, ಸಂಘಟಕ, ಅಡ್ವಕೇಟ್ ಬಿ.ಎ. ಮುಹಮ್ಮದ್ ಹನೀಫ್ ಆಯ್ಕೆಯಾಗಿದ್ದಾರೆ. ಪರಿಚಯ: 1965ರ ಜುಲೈ 1ರಂದು ಬಿ.ಎಂ. ಅಬ್ದುಲ್ ರಹ್ಮಾನ್-ಖತೀಜಾ ದಂಪತಿಯ ಪುತ್ರನಾಗಿ ಜನಿಸಿದ ಬಿ.ಎ. ಮುಹಮ್ಮದ್ ಹನೀಫ್ ಬೆಳ್ತಂಗಡಿ ತಾಲೂಕಿನ

ಕ್ರಿಮಿನಲ್ ಕೇಸ್ ದಾಖಲು : ಬಸ್ಸು ಮಾಲಕರ ಸಂಘದೊಂದಿಗೆ ಸಮಾಲೋಚನೆ

ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ನೇತೃತ್ವದಲ್ಲಿ ಉಳ್ಳಾಲ, ದೇರಳಕಟ್ಟೆ, ಮುಡಿಪು ಭಾಗದ ಬಸ್ಸು ಚಾಲಕ, ನಿರ್ವಾಹಕರ ನಿಯೋಗ ದ.ಕ. ಬಸ್ಸು ಮಾಲಕರ ಸಂಘದ ಕಚೇರಿಗೆ ಭೇಟಿ ನೀಡಿ ಮಾಲಕರ ಸಂಘದ ಮುಖಂಡರೊಂದಿಗೆ ಮಾತುಕತೆ ನಡೆಸಿತು.‌ ಇತ್ತೀಚೆಗೆ ಬಸ್ಸಿನಿಂದ ಆಕಸ್ಮಿಕವಾಗಿ ಪಿ ಯು ವಿದ್ಯಾರ್ಥಿ ಜಾರಿ ಬಿದ್ದು ಮೃತ ಪಟ್ಟ ಘಟನೆಯಲ್ಲಿ ಚಾಲಕ, ನಿರ್ವಾಹಕರ ಮೇಲೆ ಸೆಕ್ಷನ್ 304 ಹಾಕಿ ಜೈಲಿಗೆ ಕಳುಹಿಸಿದ ಪ್ರಕರಣದ ಕುರಿತು ಹಾಗೂ ಪೊಲೀಸರಿಂದ ಚಾಲಕ, ನಿರ್ವಾಹಕರಿಗೆ

ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನಲ್ಲಿ : ಡಾ. ಎಂ.ಎಮ್ ಧಾವಲೆ ಸ್ಮರಣಾರ್ಥ ಉಪಾನ್ಯಾಸ

ದೇರಳಕಟ್ಟೆ: ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನಲ್ಲಿ ಡಾ.ಎಂ.ಎಲ್. ಧಾವಲೆ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಮುಂಬಾಯಿ ಡಾ.ಎಂ.ಎಲ್. ಧವಲೇ ಮೆಮೋರಿಯಲ್ ಹೋಮಿಯೋಪಥಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ.ಬಿಪಿನ್ ಜೈನ್ ಒಂದು ದಿನದ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ವೈದ್ಯಕೀಯ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶದ ಸಾಧನೆ ಮಹತ್ತರವಾದುದು. ಇಂದಿನ ಆಧುನಿಕತೆಯ ಕಾಲಘಟ್ಟದಲ್ಲಿ

ಕೆ.ಎಸ್. ಹೆಗ್ಡೆ ಮಾದಕ ದ್ರವ್ಯ ಸೇವನೆ, ಅಕ್ರಮ ಸಾಗಾಟದ ವಿರುದ್ಧ ಜಾಗೃತಿ

ದೇರಳಕಟ್ಟೆ: ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಅಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗ ಮತ್ತು ಆಳ್ವಾಸ್ ಕಾಲೇಜಿನ ಪದವಿ ಕಾಲೇಜಿನ ಸಮಾಜಕಾರ್ಯ ವಿಭಾಗದ ಆಶ್ರಯದಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಟದ ವಿರುದ್ದ ಅಂತರಾಷ್ಟ್ರೀಯ ದಿನಾಚರಣೆಯ ಮತ್ತು ಜಾಗೃತಿ ಕಾರ್ಯಕ್ರಮ ಅಸ್ಪತ್ರೆ ಗ್ಲಾಸ್ ಹೌಸ್ ನಲ್ಲಿ ನಡೆಯಿತು.ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ಪದವಿ ವಿಭಾಗದ ಮುಖ್ಯಸ್ಥ ಡಾ.ಮಧುಮಾಲ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಟದ ವಿರುದ್ದ

ದೇರಳಕಟ್ಟೆಯ ಕಾನೆಕೆರೆ ಗುಡ್ಡ ಕುಸಿತ : ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ಯು.ಟಿ. ಖಾದರ್ ಭೇಟಿ

ಉಳ್ಳಾಲ: ಮಳೆಯಿಂದ ಹಾನಿಗೀಡಾದ ಬೆಳ್ಮ ಗ್ರಾ.ಪಂ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಶಾಸಕ ಯು.ಟಿ ಖಾದರ್ ಭೇಟಿ ನೀಡಿ ತುರ್ತು ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.ಬೋರುಗುಡ್ಡೆ ಎರಡು ಮನೆಗಳ ಮೇಲೆ ಗುಡ್ಡೆ ಜರಿತವಾಗಿ ಹಾನಿ, ರೆಂಜಾಡಿಯ ಪಾಲೆದಡಿ ಮಸೀದಿ ಬಳಿ ಹಾನಿ, ಕೊಳಕೆಬೈಲ್ ಗುಡ್ಡ ಜರಿತ ಹಾಗೂ ಕಾನಕೆರೆ ಬಳಿ ಪೆಟ್ರೋಲ್ ಪಂಪ್ ಹಿಂಭಾಗದ ಒಂದು ಭಾಗ ಜರಿತ ಉಂಟಾಗಿದೆ. ಇವೆಲ್ಲವನ್ನು ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ