ಪೌಷ್ಟಿಕ ಮಾಸಾಚರಣೆ -24 : ಆಯುಷ್ಮಾನ್ ಆರೋಗ್ಯ ಮಂದಿರ ಕಾಲ್ತೋಡು
“ನಮ್ಮ ಹಿರಿಯರ ಸಾಂಪ್ರದಾಯಿಕ ಆಹಾರ ಪದ್ಧತಿ ಹಾಗೂ ನಮ್ಮ ಸುತ್ತಮುತ್ತಲ ಬೆಳೆಯುವ ಸೊಪ್ಪು ತರಕಾರಿಗಳು ಪೋಷಕಾಂಶಗಳ ಆಗರವಾಗಿದೆ. ದಿನನಿತ್ಯದ ಆಹಾರದಲ್ಲಿ ಇದನ್ನ ಉಪಯೋಗಿಸುವುದರಿಂದ ನಮಗೆ ಪೌಷ್ಟಿಕಾಂಶಗಳ ಕೊರತೆ ಉಂಟಾಗದು ಈ ನಿಟ್ಟಿನಲ್ಲಿ ವಿವಿಧ ಆಹಾರ ಪದಾರ್ಥಗಳು ಆಹಾರಗಳನ್ನ ಪ್ರದರ್ಶನಕ್ಕೆ ಇಟ್ಟು ಆಯೋಜಿಸಲಾದ ಈ ಪೌಷ್ಧಿಕ ಮಾಸ ಆಚರಣೆ ಅರ್ಥ ಪೂರ್ಣವಾದದ್ದು ಎಂದು ಜಿಲ್ಲಾ ಪಂಚಾಯತ್ ಉಡುಪಿ ಆಯುಷ್ ಇಲಾಖೆ ಉಡುಪಿ ಗ್ರಾಮ ಪಂಚಾಯತ್ ಕಾಲ್ತೋಡು ಆಯುಷ್ಮಾನ್ ಆರೋಗ್ಯ ಮಂದಿರ ಆಯುರ್ವೇದ ಚಿಕಿತ್ಸಾಲಯ ಕಾಲ್ಪೋಡು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಪೌಷ್ಟಿಕ ಮಾಸಾಚರಣೆಯ ಉದ್ಘಾಟನೆಯನ್ನು ನೆರವೇರಿಸಿ ಸಮಾಜಸೇವಕರು ಹಿರಿಯರು ಆದ ಶ್ರೀಯುತ ಸಂಜೀವ್ ಶೆಟ್ಟಿ ಅವರು ಉದ್ಘಾಟಿಸಿ ನುಡಿದರು” .
ಮುಖ್ಯ ಅತಿಥಿಗಳಾಗಿದ್ದ ಇಂದಿರಾ ನಾಯಕ್ ಮೇಲ್ವಿಚಾರಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕುಂದಾಪುರ ಇವರು ಅಂಗನವಾಡಿಯಲ್ಲಿ ದೊರೆಯುವ ವಿವಿಧ ಸೌಲಭ್ಯಗಳು ಹಾಗೂ ಪೌಷ್ಟಿಕ ಆಹಾರಗಳ ಬಗ್ಗೆ ಮಾಹಿತಿಯನ್ನ ನೀಡಿದರು. ಜೊತೆಯಲ್ಲಿ ಪೋಷಣ್ ಮಾಸಾಚರಣೆಯ ಉದ್ದೇಶ ಹಾಗೂ ಅದರ ಗುರಿಗಳನ್ನು ಕೂಡ ವಿವರಿಸಿದರು. ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು ಇದರ ವೈದ್ಯಾಧಿಕಾರಿಗಳಾದ ಡಾ|| ವೀಣಾ ಕಾರಂತ್ ರವರು ಪ್ರದರ್ಶನಕ್ಕೆ ಇಟ್ಟ ಸೊಪ್ಪು ತರಕಾರಿಗಳು ಹಾಗೂ ಆಹಾರ ಪದಾರ್ಥಗಳಲ್ಲಿರುವ ಪೌಷ್ಟಿಕಾಂಶಗಳು ಹಾಗೂ ಸುಲಭವಾಗಿ ತಯಾರಿಸಬಲ್ಲ ಆಹಾರವನ್ನು ವಿವರಿಸಿದರು . ಜೊತೆಯಲ್ಲಿ ವಿಶ್ವ ಅಲ್ಜಿಮರ್ ದಿನದ ಕುರಿತು ಮಾತನಾಡುತ್ತಾ ಅಲ್ಜಿಮರ್ ಕಾಯಿಲೆಯ ಬಗ್ಗೆ ವಿವರಿಸಿ ನೆನಪಿನ ಶಕ್ತಿಯನ್ನ ಹೆಚ್ಚಿಸುವಲ್ಲಿ ಒಂದೆಲಗವನ್ನ ನಿತ್ಯ ಜೀವನದಲ್ಲಿ ಆಹಾರದಲ್ಲಿ ಉಪಯೋಗಿಸುವಂತೆ ತಿಳಿಸಿದರು. ಸುಭಾಷ್ ಸಿ.ಎಚ್. ಓ ಪ್ರಾಥಮಿಕ ಆರೋಗ್ಯ ಕೇಂದ್ರ ಕಿರೀಮಂಜೇಶ್ವರ ಹಾಗೂ ಯೋಗ ತರಬೇತುದಾರರಾದ ಸರಸ್ವತಿ ಕುಲಾಲ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.” ಏಕ್ ಪೇಡ ಮಾ ಕೆ ನಾಮ್” ಅನ್ನುವಲ್ಲಿ ಔಷಧೀಯ ಸಸ್ಯಗಳನ್ನ ವಿತರಿಸಲಾಯಿತು.ಜೊತೆಯಲ್ಲಿ ಎಲ್ಲರಿಗೂ ಆಯುಷ್ ಮಾಹಿತಿಯುಳ್ಳ ಕರಪತ್ರಗಳು ಹಾಗೂ ಆಯುಷ್ ಕಷಾಯ ವಿತರಿಸಲಾಯಿತು.
ಗ್ರಾಮ ಪಂಚಾಯತ ಕಾಲ್ತೋಡು ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಸೀಮಂತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ನಂತರ 30 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ನಡೆಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಹಾಗೆ ಆಯುಷ್ಮಾನ್ ಆರೋಗ್ಯ ಮಂದಿರದ ಸಿಬ್ಬಂದಿಗಳಾದ ಸರಸ್ವತಿ, ನಾಗದೀಪ, ಹಾಗೂ ವಿಶಾಲ ರವರು ಕಾರ್ಯಕ್ರಮಕ್ಕೆ ಸಹಕರಿಸಿದರು. ಅಂಗನವಾಡಿ ಶಿಕ್ಷಕಿ ಸುಮಾ ಪ್ರಾರ್ಥಿಸಿ, ಡಾಕ್ಟರ್ ವೀಣಾ ಕಾರಂತರವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.