ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಕಾನೂನು ಜಾರಿ , ಪುತ್ತೂರಿನ ನಗರಸಭೆಯ ವಾರ್ಡ್ ಸದಸ್ಯರು ಸಹಕಾರ ನೀಡಬೇಕು : ಅಧ್ಯಕ್ಷ ಕೆ. ಜೀವಂಧರ್ ಜೈನ್ ಮನವಿ

ಪುತ್ತೂರು: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕಾನೂನನ್ನು ಕಟ್ಟುನಿಟ್ಟಿನ ಜಾರಿಗೆ ಮುಂದಾಗಿದ್ದಾರೆ. ಜು.1 ರಿಂದಲೇ ಇದರ ಅನುಷ್ಠಾನಕ್ಕೆ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಜಾಗೃತಿ ಹಾಗೂ ಪಾಲನೆಯಲ್ಲಿ ನಗರಸಭೆಯ ಎಲ್ಲಾ ವಾರ್ಡಗಳ ಸದಸ್ಯರು ಸಹಕಾರ ನೀಡಬೇಕು ಎಂದು ಪುತ್ತೂರು ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮನವಿ ಮಾಡಿದ್ದಾರೆ.

ನಗರಸಭಾ ಸಾಮಾನ್ಯ ಸಭೆಯು ಜೀವಂಧರ್ ಜೈನ್ ಅಧ್ಯಕ್ಷತೆಯಲ್ಲಿ ನಡೆಯಿತು. 2016ರಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಆದೇಶ ಬಂದಿತ್ತು. ಆಗ ಮನೆ ಮನೆಗಳಿಗೆ ಮಾಹಿತಿ ನೀಡಲಾಗಿದೆ. ಆ ಸಂದರ್ಭದಲ್ಲಿ ವರ್ತಕರು ಸಮಯಾವಕಾಶ ಕೇಳಿದ್ದರು. ಈಗ ಕಟ್ಟುನಿಟ್ಟಿನ ಜಾರಿಗೆ ಸರಕಾರದ ಸೂಚನೆ ಇದೆ. ಈಗಾಗಲೇ ನಗರಸಭೆಯಿಂದ ಹಲವು ರೀತಿಯಲ್ಲಿ ಜಾಗೃತಿ ಮೂಡಿಸುವ, ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ. ಮುಂದಕ್ಕೆ ದಂಡ ರೂಪದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧ್ಯಕ್ಷರು ಹೇಳಿದರು

.50 ಮೈಕ್ರಾನ್ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಹಾಳೆ ಅಥವಾ ಅದೇ ತರದ ವಸ್ತು, ಬಹು ಪದರ ಪ್ಲಾಸ್ಟಿಕ್‍ನಿಂದ ಮಾಡಿದ ಪ್ಯಾಕೇಜಿಂಗ್ ಮತ್ತು ಕವರ್, ಸುತ್ತುವಿಕೆಗೆ ಬಳಸುವ ಹಾಳೆಗಳ ಸರಕುಗಳು ತಯಾರಿಸುವವರಿಗೆ ಆರಂಭದಲ್ಲಿಉತ್ಪನ್ನಗಳ ವಶಪಡಿಸಿಕೊಳ್ಳುವಿಕೆ, ಅನಂತರ ಘಟಕದ ಮುಚ್ಚುವಿಕೆ, ಪರವಾನಿಗೆ ರದ್ದುಪಡಿಸುವಿಕೆ, ಮುಂದುವರೆದು ಪ್ರತಿ ಟನ್ ಪ್ಲಾಸ್ಟಿಕ್ ಬಳಸಲಾದ ತಂಬಾಕು ಉತ್ಪನ್ನಗಳ ಪ್ಯಾಕೇಜಿಂಗ್ 1 ನೇ ಬಾರಿ ಉಲ್ಲಂಘನೆಗೆ 5,000, 2 ನೇ ಬಾರಿ 10,000, 3 ನೇ ಬಾರಿ 20,000, ಅನಂತರದಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ಲಾಸ್ಟಿಕ್ ಕೊಂಡೊಯ್ಯುವ ಸಾರ್ವಜನಿಕರೂ ದಂಡ ವಿಧಿಸುವಂತೆ ವರ್ತಕರು ಮನವಿ ಮಾಡಿದ್ದಾರೆ. ಬಸ್ ನಿಲ್ದಾಣ, ಮಾರುಕಟ್ಟೆಗಳಲ್ಲಿ ಹೆಚ್ಚಿನ ಜಾಗೃತಿ ಮಾಡಲಾಗುವುದು. ನಮ್ಮ ಮುಂದಿನ ಪೀಳಿಗೆಗೂ ಒಳ್ಳೆಯ ಪರಿಸರ ಉಳಿಸುವ ಜವಾಬ್ದಾರಿ ಎಲ್ಲರದ್ದೂ ಆಗಿರುವುದರಿಂದ ಈ ಪ್ರಕ್ರಿಯೆಯನ್ನು ಸಂಘಟಿತ ಪ್ರಯತ್ನದ ಮೂಲಕ ಯಶಸ್ವಿಗೊಳಿಸಿ ಸ್ವಚ್ಛ ಪುತ್ತೂರಿಗೆ ಕೈಜೋಡಿಸಬೇಕು ಎಂದು ಜೀವಂಧರ್ ಜೈನ್ ವಿನಂತಿಸಿದರು.

ವೇದಿಕೆಯಲ್ಲಿ ನಗರಸಭಾ ಉಪಾಧ್ಯಕ್ಷೆ ವಿದ್ಯಾ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಕೆ. ಉಪಸ್ಥಿತರಿದ್ದರು. ನಗರಸಭಾ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡರು.

Related Posts

Leave a Reply

Your email address will not be published.