ಅತೀ ವೇಗ, ಅಜಾಗರುಕತೆಯ ಚಾಲನೆ : ಚಾಲಕನ ವಿರುದ್ಧ ಕ್ರಮಕೈಗೊಂಡ ಮೂಡುಬಿದಿರೆ ಇನ್ಸ್ ಪೆಕ್ಟರ್

ಮೂಡುಬಿದಿರೆ: ಮಂಗಳೂರು – ಮೂಡುಬಿದಿರೆ ಮಾರ್ಗವಾಗಿ ನಿನ್ನೆ ( ಮಂಗಳವಾರ) ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಬಸ್ KA 19 AB 1339 ನ್ನು ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿಜಿ ಅವರು ವಶಕ್ಕೆ ಪಡೆದುಕೊಂಡಿದ್ದಾರೆ ಮತ್ತು ಚಾಲಕನ ವಿರುದ್ಧ ಕ್ರಮಕೈಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯು ನಡೆಯುತ್ತಿರುವುದರಿಂದ ವಾಹನ ಸವಾರರು ಬಹಳ ಜಾಗರೂಕತೆಯಿಂದ ವಾಹನವನ್ನು ಚಲಾಯಿಸುವುದು ಅವಶ್ಯಕ. ಆದರೆ ಮಂಗಳವಾರ ಸಂಜೆ ವೇಳೆಯಲ್ಲಿ ಮಂಗಳೂರಿನಿಂದ ಮೂಡುಬಿದಿರೆಗೆ ಸಂಚರಿಸುವ ವೇಳೆ ತೋಡಾರು ಯೆನೆಪೋಯ ಎಂಜಿನಿಯರಿಂಗ್ ಕಾಲೇಜು ಬಳಿ ಕಾಮಗಾರಿ ನಡೆಯುತ್ತಿದ್ದ ಇನ್ನೊಂದು ರಸ್ತೆಯ ಮೂಲಕ ಅತಿ ವೇಗದಿಂದ ಬಂದು ಲೋಕಲ್ ಬಸ್ ನ್ನು ಓವರ್ ಟೇಕ್ ಮಾಡುವ ಭಯಾನಕ ದೃಶ್ಯ ಕಂಡು ಬಂದಿದ್ದು ಇದನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ಇದು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿಜಿ ಅವರ ಗಮನಕ್ಕೆ ಬಂದಿದ್ದು ತಕ್ಷಣಕ್ಕೆ ಎಚ್ಚೆತ್ತುಕೊಂಡ ಅವರು ಸ್ವಯಂ ಪ್ರೇರಿತವಾಗಿ ಕ್ರಮಕೈಗೊಂಡು ಜೈನ್ ಎಂಬ ಹೆಸರಿನ ಖಾಸಗಿ ಬಸ್ ನ್ನು ಠಾಣೆಯ ಆವರಣಕ್ಕೆ ತಂದು ನಿಲ್ಲಿಸುವ ಮೂಲಕ ಜನ ಮೆಚ್ಚುವ ಕೆಲಸವನ್ನು ಮಾಡಿದ್ದಾರೆ.

Related Posts

Leave a Reply

Your email address will not be published.