ಗಂಗೊಳ್ಳಿ–ಕುಂದಾಪುರ ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಶ್ರೀಚಕ್ರ ನೂತನ ಬಸ್ ಸೇವೆಗೆ ಶುಭಾರಂಭಗೊಂಡಿದೆ. ಶುಭಾರಂಭದ ಅಂಗವಾಗಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ನೆರವೇರಿಸಿ ಬಸ್ ಸೇವೆಗೆ ಚಾಲನೆ ನೀಡಲಾಯಿತು. ಉತ್ತಮ ಚಾಲಕ ಹಾಗೂ ಉತ್ತಮ ಸೇವೆಯೊಂದಿಗೆ ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣ ಒದಗಿಸುವ ಉದ್ದೇಶದಿಂದ ಈ ಸಾರಿಗೆ ಸೇವೆ ಆರಂಭಿಸಲಾಗಿದೆ.

ಈ ಬಸ್ ಸೇವೆಯ ವಿಶೇಷತೆ ಎಂದರೆ, ಸಂದೇಶ್ ಹಾಗೂ ರಾಕೇಶ್ ಭಟ್ ಅವರ ತಂದೆಯವರ ಬಹುದಿನಗಳ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ, ತಮ್ಮ ಹುಟ್ಟೂರಿನಲ್ಲೇ ನೂತನ ಸಾರಿಗೆ ಉದ್ಯಮಕ್ಕೆ ಶುಭಾರಂಭ ಮಾಡಿರುವುದು. ತಂದೆಯವರು ದೈವಾಧೀನರಾದ ಬಳಿಕವೂ ಅವರ ಕನಸನ್ನು ಸಾಕಾರಗೊಳಿಸಬೇಕೆಂಬ ಸಂಕಲ್ಪದೊಂದಿಗೆ ಸಹೋದರರು ಈ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಬಸ್ ಮಾಲೀಕರಾದ ಸಂದೇಶ್ ಭಟ್ ಅವರು ಮಾತನಾಡಿ, ತಂದೆಯವರ ಬಹುದಿನಗಳ ಕನಸು ಇಂದು ನನಸಾಗಿದ್ದು, ಈ ಹೊಸ ಸಾರಿಗೆ ಉದ್ಯಮಕ್ಕೆ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಹಾಗೂ ಸಹಕಾರ ಸದಾ ಇರಲಿ ಎಂದು ಹೇಳಿದರು.
ಗಂಗೊಳ್ಳಿಯಿಂದ ಕುಂದಾಪುರ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುವ ಈ ಬಸ್ ರಾಜಾಜಿನಗರ, ಮೆಜೆಸ್ಟಿಕ್, ಲಾಲ್ಬಾಗ್, ಆಶ್ರಮ, ವಿದ್ಯಾಪೀಠ, ಉತ್ತರಹಳ್ಳಿ, ಕೋಣನಕುಂಟೆ, ಜೆ.ಪಿ.ನಗರ, ವಿಜಯ ಬ್ಯಾಂಕ್ ಲೇಔಟ್, ಹುಳಿಮಾವು, ಗೊಟ್ಟಿಗೆರೆ, ಕೊಳಿಫಾರಂ ಗೇಟ್ ಹಾಗೂ ಬನ್ನೇರುಘಟ್ಟ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ನಿಲುಗಡೆ ಹೊಂದಿರಲಿದೆ.


