ಪಡೀಲ್‍ನ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ

ಮಂಗಳೂರಿನ ಪಡೀಲ್‍ ಕೊಡಕಲ್‍ನಲ್ಲಿ ಇಂದು ಜಯ ಶೆಟ್ಟಿ ಎಂಬವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಹಲವಾರು ಪ್ರಮುಖ ದಾಖಲೆ ಪತ್ರಗಳ ಸಹಿತ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ಬೆಂಕಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಅಗ್ನಿ ಶಾಮಕದಳದ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ ಜಯಶೆಟ್ಟಿ ಅವರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ನಡೆದಿರಬಹುದೆಂದು ಸ್ಥಳಿಯರು ಸಂಶಯ ವ್ಯಕ್ತಪಡಿಸಿದ್ದಾರೆ,

ಇನ್ನು ಜಯ ಶೆಟ್ಟಿ ಅವರ ಪುತ್ರ ಇತ್ತೀಚಿಗಷ್ಟೇ ವಿದೇಶದಿಂದ ಆಗಮಿಸಿದ್ದು ಪಾದಯಾತ್ರೆಯ ಮೂಲಕ ಶಬರಿಮಲೆಗೆ ತೆರಳಿದ್ದಾರೆ.

Related Posts

Leave a Reply

Your email address will not be published.