HomeFresh Newsಪಡುಬಿದ್ರಿ: ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪಂಚದೈವೀಕ ಸ್ಥಾನ ಅಭಿವೃದ್ಧಿಗೆ ಶಿಲಾನ್ಯಾಸ

ಪಡುಬಿದ್ರಿ: ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪಂಚದೈವೀಕ ಸ್ಥಾನ ಅಭಿವೃದ್ಧಿಗೆ ಶಿಲಾನ್ಯಾಸ

ಪಡುಬಿದ್ರಿ:ಸಮಗ್ರ ಜೀರ್ಣೋದ್ಧಾರ ಗೊಳ್ಳುತ್ತಿರುವ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಸಂಬಂಧ ಪಟ್ಟಂತೆ ಪಂಚ ದೈವಗಳಿಗೆ ಪಡುಬಿದ್ರಿ ಗಣಪತಿ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ಸಹಭಾಗಿತ್ವದಲ್ಲಿ ದೇಗುಲದ ಪುಷ್ಕರಣೀ ತಟದಲ್ಲಿ ನಿರ್ಮಿಸಲ್ಪಡುವ ಅಂದಾಜು 15 -20 ಲಕ್ಷ ರೂಪಾಯಿ ವೆಚ್ಚದ ನೂತನ ಗುಡಿಗಳ ಕಾಮಗಾರಿಯ ಶಿಲಾನ್ಯಾಸವು ಇಂದು ದಿನಾಂಕ 18 ಬುಧವಾರದಂದು ಜರಗಿತು.
ಪಂಚದೈವೀಕ ಸ್ಥಾನದ ಶಿಲಾನ್ಯಾಸದ ಧಾರ್ಮಿಕ ವಿಧಿ ವಿಧಾನಗಳನ್ನು ದೇವಸ್ಥಾನದ ಅರ್ಚಕರಾದ ಗುರುರಾಜ್ ಭಟ್ ಏರ್ಮಾಳು ನೆರವೇರಿಸಿದರು.

ಶಿಲಾನ್ಯಾಸವನ್ನು ಸಂಘದ ಹಿರಿಯ ಸದಸ್ಯ ಸದಾಶಿವ ಆಚಾರ್ ನೆರವೇರಿಸಿದರು.

ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ಕೆ. ರಾಜ ಗೋಪಾಲ್ ಉಪಾಧ್ಯಾಯ, ಅನುವಂಶಿಕ ಮೊಕ್ತೇಸರ ಭವಾನಿ ಶಂಕರ್ ಹೆಗ್ಡೆ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ರವೀಂದ್ರನಾಥ .ಜಿ. ಹೆಗ್ಡೆ, ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ, ಮುರಳಿನಾಥ್ ಶೆಟ್ಟಿ, ಅನಿಲ್ ಶೆಟ್ಟಿ ಪೇಟೆಮನೆ, ನವೀನ್ .ಎನ್.ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ಚಂದ್ರ .ಜೆ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮಾಕಾಂತ್ ರಾವ್, ಕೋಶಾಧಿಕಾರಿ ಕಸ್ತೂರಿ ರಾಮಚಂದ್ರ, ಸರ್ವಜ್ಞ ಆಚಾರ್, ಪ್ರಕಾಶ್ ಶೆಟ್ಟಿ ಪೇಟೆಮನೆ, ಮಾಧವ .ಸಿ. ಶೆಟ್ಟಿ, ಮಧುಕರ್ ಶೆಣೈ, ರಾಜೇಂದ್ರ ಶೆಣೈ, ಸತೀಶ್ ಆಚಾರ್ಯ ,ಸುಮತಿ ವಿ.ಹೆಗ್ಡೆ, ಪೂರ್ಣಿಮಾ ಜಯ ಶಂಕರ, ಅನಸೂಯ ಶೆಣೈ ಹಾಗೂ ಉಭಯ ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments