ಟೋಲ್ ಗೇಟ್ ಬಗ್ಗೆ ಶಾಶ್ವತ ರದ್ಧತಿ ಪತ್ರ ಕೈ ಸೇರುವವರಗೆ ಹೋರಾಟ ನಿರಂತರ:ಆ.24ರಂದು ಹತ್ತು ಸಾವಿರಕ್ಕೂ ಅಧಿಕ ಮಂದಿ ಸೇರಿ ಪ್ರತಿಭಟನೆ
ಪಡುಬಿದ್ರಿ-ಬೆಳ್ಮಣ್-ಕಾರ್ಕಳ ಟೋಲ್ ಹೋರಾಟ ವಿರೋಧಿ ಸಮಿತಿಯ ವತಿಯಿಂದ ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತವಾಗಿ ನಡೆಯಲು ಉದ್ಧೇಶಿಸಿದ ಟೋಲ್ ಗೇಟ್ ವಿರೋಧಿ ಹೋರಾಟವು ಯಾವುದೇ ಗೊಂದಲಗಳಿಲ್ಲಿದೆ ಅ.24ರಂದು ನಿರ್ಧರಿಸಿದಂತೆ ನಡೆಯಲಿದೆ ಎಂಬುದಾಗಿ ಸಮಿತಿ ಕಾರ್ಯದರ್ಶಿಯೂ ನ್ಯಾಯಾವಾದಿಯೂ ಆದ ಸರ್ವಜ್ಞ ತಂತ್ರಿ ಸ್ಪಷ್ಟ ಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ಊಹಾಪೋಹಗಳು ಹರಿದಾಡುತ್ತಿದ್ದು, ಇದಕ್ಕೆ ಯಾವುದೇ ಮನ್ನಣೆ ನೀಡದೆ ಸಾರ್ವಜನಿಕರೆಲ್ಲರೂ ಈ ಹೋರಾಟದಲ್ಲಿ ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸುವ ಮೂಲಕ ಪಡುಬಿದ್ರಿ- ಕಾರ್ಕಳ ಹೆದ್ದಾರಿಗೆ ಅಳವಡಿಸಲು ಉದ್ದೇಶಿಸಿರುವ ಟೋಲ್ ಗೇಟ್ ಸಂಪೂರ್ಣ ರದ್ದಾಗುವಂತಾಗಬೇಕಿದೆ ಎಂದರು.ಈ ಸಂದರ್ಭ ಹೋರಾಟ ಸಮಿತಿಯ ಅಧ್ಯಕ್ಷ ಎನ್.ಸುಹಾಸ್ ಹೆಗ್ಡೆ ಹಾಗೂ ಕೋಶಾಧಿಕಾರಿ ಎನ್. ಶಶಿಧರ್ ಶೆಟ್ಟಿ ಜೊತೆಗಿದ್ದರು.