ಪುತ್ತೂರು : ಆಶೀರ್ವಾದ ಎಂಟರ್‌ಪ್ರೈಸೆಸ್ ನ 2.0 ಶುಭಾರಂಭ ಹಾಗೂ ಲೋಗೋ ಅನಾವರಣ
ಪುತ್ತೂರಿನ ದರ್ಬೆಯಲ್ಲಿರುವ ಆಶೀರ್ವಾದ ಎಂಟರ್‌ಪ್ರೈಸೆಸ್ ನ 2.0ದ ಶುಭಾರಂಭ ಹಾಗೂ ಲೋಗೋ ಅನಾವರಣ ಮತ್ತು ೧೬೦ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣಾ ಕಾರ್ಯಕ್ರಮವು ಅಗಸ್ಟ್ 25ರಂದು ಸಂಜೆ 3 ಗಂಟೆಗೆ ನಡೆಯಲಿದೆ.
ಆಶೀರ್ವಾದ ಎಂಟರ್‌ಪ್ರೈಸಸ್ 2.0 ಶುಭಾರಂಭಗೊಳ್ಳಲಿದೆ. ಈ ಹಿಂದೆ ವಿನೂತನ ಹಾಗೂ ವಿಶೇಷ ಬಹುಮಾನಗಳನ್ನು ಗ್ರಾಹಕರಿಗೆ ನೀಡುತ್ತಿದ್ದ ಆಶೀರ್ವಾದ ಎಂಟರ್ ಪ್ರೈಸಸ್ ಇದೀಗ ಮತ್ತೆ ಜನತೆಗಾಗಿ ವಿನೂತನ ಯೋಜನೆಗಳನ್ನು ಹೊತ್ತು ತಂದಿದೆ.
ಪುತ್ತೂರಿನ ಬೈಪಾಸ್ ರಸ್ತೆಯ ಅಶ್ಮಿ ಕಂಫರ್ಟ್‌ನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ತುಳು ಚಿತ್ರರಂಗದ ಕಲಾವಿದರಾದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ತುಳುನಾಡ ರಂಗಬೊಳ್ಳಿ ರವಿ ರಾಮಕುಂಜ, ಡೈಜಿವರ್ಲ್ಡ್ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ, ಯೂಟ್ಯೂಬರ್ ಆತ್ಮೀಯ ಗಾನ ನಾಯಕ್, ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಮತ್ತು ಸಿಝ್ಲರ್ಸ್ ಅಗ್ರಿಝೋನ್‌ನ ಪ್ರಸನ್ನ ಕುಮಾರ್ ಶೆಟ್ಟಿ, ಉದ್ಯಮಿ ಲಕ್ಷ್ಮಣ ಬೈಲಾಡಿ ಸಂಪ್ಯ, ಜಯರಾಜ್ ಶೆಟ್ಟರ್, ಝೀ ಕನ್ನಡ ಚೋಟಾ ಚಾಂಪಿಯನ್ ವಿನ್ನರ್ 2023 ಬೇಬಿ ಆತ್ಮಿ ಗಣ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.