ಹೊಯಿಗೆ ಫ್ರೆಂಡ್ಸ್ ಪಲಿಮಾರು ; ಹಾವು ನಾವು ಮತ್ತು ಪರಿಸರ ವಿಷಯದ ಕುರಿತು ಜಾಗೃತಿ

ಹೊಯಿಗೆ ಫ್ರೆಂಡ್ಸ್ (ರಿ) ಪಲಿಮಾರು” ಸಂಸ್ಥೆಯ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ, ಖ್ಯಾತ ಉರಗ ತಜ್ಞ ಶ್ರೀ ಗುರುರಾಜ್ ಸನಿಲ್ ಉಡುಪಿ ಇವರಿಂದ, ‘ಹಾವು ನಾವು ಮತ್ತು ಪರಿಸರ’ ಎಂಬ ವಿಷಯದ ಕುರಿತು ಜಾಗ್ರತಿ ಮೂಡಿಸುವ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಜೀವಂತ ಹಾವುಗಳನ್ನು ತಂದು,ಅವುಗಳ ಪರಿಚಯವನ್ನು ಮಾಡಿಸಿದರು.

ಹಾವುಗಳು ಕಾರಣವಿಲ್ಲದೆ ಯಾರಿಗೂ ಕಚ್ಚುವುದಿಲ್ಲ ವಿದ್ಯಾರ್ಥಿಗಳು ಹಾವುಗಳನ್ನು ಕಂಡು ಭಯಪಡಬೇಕಾಗಿಲ್ಲ ಎಂಬುದಾಗಿ, ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಗ್ರೆಟ್ಟಾ ಮೊರಾಸ್ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಪಲಿಮಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಡಿ ಪ್ರಭು , ಉಪಾಧ್ಯಕ್ಷೆ ಸೌಮ್ಯಲತ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಸಾದ್ ಪಲಿಮಾರ್ , ಹೊ?ಗೆ ಫ್ರೆಂಡ್ಸ್ ಅಧ್ಯಕ್ಷ ರಾಘವೇಂದ್ರ ಜೆ ಸುವರ್ಣ , ಉಪಾಧ್ಯಕ್ಷ ರಿತೇಶ್ ದೇವಾಡಿಗ , ಪಂಚಾಯತ್ ಸದಸ್ಯರಾದ ಸುಮಂಗಳ ದೇವಾಡಿಗ, ರಾಯೆಶ್ವರ ಪೈ , ಸುಜಾತಾ ,ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಶಕಿ ಸುನಿತಾ ,ಟೆರಾಕೋಟ ಕಲಾವಿದ ವೆಂಕಿ ಪಲಿಮಾರ್ ಉಪಸ್ಥಿತರಿದ್ದರು.