13ನೇ ವರ್ಷದ ಪಣಪಿಲದಲ್ಲಿ ಜಯ-ವಿಜಯ ಜೋಡುಕರೆ ಕಂಬಳ
ಮೂಡುಬಿದಿರೆ: “ಜಯ-ವಿಜಯ” ಜೋಡುಕರೆ ಕಂಬಳ ಸಮಿತಿ ಪಣಪಿಲ ಇದರ ವತಿಯಿಂದ ನಡೆಯುವ ಹದಿಮೂರನೇ ವರುಷದ ಕಿರಿಯ ವಿಭಾಗದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ನಡೆಯಿತು.
2022-23 ನೇ ಸಾಲಿನ ಕೊನೆಯ ಕಂಬಳ ಇದಾಗಿದ್ದು, ಊರಿನ ದೈವಸ್ಥಾನ, ದೇವಸ್ಥಾನಗಳ ಪ್ರಸಾದ ಮತ್ತು ತೀರ್ಥವನ್ನು ಕರೆಗೆ ಹಾಕುವ ಮೂಲಕ ಪಣಪಿಲ ಅರಮನೆಯ ವಿಮಲ್ ಕುಮಾರ್ ಶೆಟ್ಟಿ ಕಂಬಳವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪಣಪಿಲ ಕಂಬಳ ಸಮಿತಿಯ ಗೌರವಾಧ್ಯಕ್ಷ ಶಾಸಕ ಉಮಾನಾಥ ಎ.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಅಳಿಯೂರು ಕಂಬಳ ಸಮಿತಿಯ ಅಧ್ಯಕ್ಷ ಯುವರಾಜ್ ಹೆಗ್ಡೆ ನಂದೊಟ್ಟು, ಕಾರ್ಯಧ್ಯಕ್ಷ ಸುಭಾಶ್ಚಂದ್ರ ಚೌಟ, ಮಜಲೋಡಿಗುತ್ತು ಪ್ರಮೋದ್ ಆರಿಗ,ಅಳಿಯೂರು ಧರೆಗುಡ್ಡೆ ಗ್ರಾ.ಪಂನ ಅಧ್ಯಕ್ಷೆ ತುಳಸಿ ಮೂಲ್ಯ, ಉಪಾಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಸದಸ್ಯರಾದ ಮುನಿರಾಜ ಹೆಗ್ಡೆ, ಸಂತೋಷ್ ಪೂಜಾರಿ, ಜನಿತಾ, ದೀಕ್ಷಿತ್ ಪಣಪಿಲ ನೆಲ್ಲಿಕಾರು ಗ್ರಾ.ಪಂ.ಅಧ್ಯಕ್ಷೆ ಸುಶೀಲ, ಮೂಡುಬಿದಿರೆ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಜಿಲ್ಲಾ ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ, ಅಳಿಯೂರು ಹೇಮಾ ರೈಸ್ ಮಿಲ್ ನ ಮಾಲಕರಾದ ಹೇಮಾ ಮತ್ತು ಕೆ.ಕೆ.ಪೂಜಾರಿ, ಇಟಲ ಸೋಮನಾಥೇಶ್ವರ ದೇವಸ್ಥಾನದ ಕಾರ್ಯಾಧ್ಯಕ್ಷ ಸುಕೇಶ್ ಶೆಟ್ಟಿ, ಉದ್ಯಮಿ ಪ್ರೇಮ್ ಕುಮಾರ್ ಜೈನ್, ಕಂಬಳದ ಕೋಣಗಳ ಯಜಮಾನ ರಂಜಿತ್ ಪೂಜಾರಿ, ಕಂಬಳ ಸಮಿತಿಯ ಉಪಾಧ್ಯಕ್ಷರುಗಳಾದ ರಮನಾಥ ಸಾಲ್ಯಾನ್, ರವಿ ಪೂಜಾರಿ, ಪ್ರವೀಣ್ ಕೋಟ್ಯಾನ್, ಜೊತೆ ಕಾರ್ಯದರ್ಶಿ ಯೋಗೀಶ್ ನಂದೊಟ್ಟು, ಕೋಶಾಧಿಕಾರಿ ಜಯಚಂದ್ರ ಎನ್ ಸದಸ್ಯ ಸಚಿನ್ ಪಣಪಿಲ, ಕಂಬಳದ ಮಾರ್ಗದರ್ಶಕರಾದ ವಿಜಯಕುಮಾರ್ ಕಂಗಿನ ಮನೆ ಉಪಸ್ಥಿತರಿದ್ದರು.
ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಅಶ್ವತ್ಥ್ ಪಣಪಿಲ ಸ್ವಾಗತಿಸಿದರು. ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.