ಪ್ಯಾರಾಲಿಂಪಿಕ್ಸ್ 5 ಪದಕ, 22ನೇ ಸ್ಥಾನದಲ್ಲಿ ಭಾರತ:ಪದಕ ಪಟ್ಟಿಯಲ್ಲಿ ಹಾಜರಿ ಹಾಕಿರುವ ದೇಶಗಳು 58
ಮೂರನೆಯ ದಿನ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚೀನಾವು 20 ಬಂಗಾರ ಸಹಿತ 42 ಪದಕದೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಭಾರತವು 5 ಪದಕದೊಡನೆ 22ನೇ ಸ್ಥಾನದಲ್ಲಿದೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಮೊದಲ ಪದಕವನ್ನು ಗೆದ್ದವರು ನೆದರ್ಲ್ಯಾಂಡ್ಸ್‌ನ ಕ್ಯಾರೋಲಿನ್ ಗ್ರೂಟ್; ಸೈಕ್ಲಿಂಗ್‌ನಲ್ಲಿ ಆ ಸಾಧನೆ ಬಂತು. ಬ್ರಿಟನ್, ಬ್ರೆಜಿಲ್, ನೆದರ್ಲ್ಯಾಂಡ್ಸ್, ಯುಎಸ್‌ಎಗಳು ಕ್ರಮವಾಗಿ 11, 8, 6, 5 ಬಂಗಾರಗಳೊಡನೆ 2, 3, 4, 5ನೇ ಸ್ಥಾನಗಳಲ್ಲಿ ಇವೆ.
58 ದೇಶಗಳು ಪದಕ ಪಟ್ಟಿಯಲ್ಲಿ ಹಾಜರಿ ಹಾಕಿವೆ. ಭಾರತವು 1-1-3=5 ಪದಕದೊಂದಿಗೆ 22ನೇ ಸ್ಥಾನದಲ್ಲಿದೆ. ಒಟ್ಟು 17 ದೇಶಗಳು ಒಂದು ಕನಕದೊಂದಿಗೆ, 2 ಸ್ವರ್ಣದೊಡನೆ 7 ನಾಡುಗಳು, 3 ಬಂಗಾರದೊಡನೆ 5 ರಾಷ್ಟ್ರಗಳು ಹಾಗೂ 5 ಚಿನ್ನದೊಡನೆ 3 ದೇಶಗಳು ಪದಕ ಪಟ್ಟಿಯಲ್ಲಿ ಇವೆ. ರುಬಿನಾ ಫ್ರಾನ್ಸಿಸ್ ಮಹಿಳಾ ಶೂಟಿಂಗ್‌ನಲ್ಲಿ ಕಂಚು ಗೆದ್ದರು.