HomeFresh Newsಮಂಗಳಾ ಈಜು ಕ್ಲಬ್ ನ ಪೂರ್ವಿ ಎಂ. ಇವರಿಗೆ ರಾಷ್ಟ್ರಮಟ್ಟದ ಈಜುಸ್ಪರ್ಧೆಯಲ್ಲಿ ಕಂಚಿನ ಪದಕ

ಮಂಗಳಾ ಈಜು ಕ್ಲಬ್ ನ ಪೂರ್ವಿ ಎಂ. ಇವರಿಗೆ ರಾಷ್ಟ್ರಮಟ್ಟದ ಈಜುಸ್ಪರ್ಧೆಯಲ್ಲಿ ಕಂಚಿನ ಪದಕ

ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆಯುತ್ತಿರುವ 68ನೇ ಎಸ್ ಜಿಎಫ್ಐ (ಸ್ಕೂಲ್ ಗೇಮ್ಸ್) ರಾಷ್ಟ್ರಮಟ್ಟದ ಈಜುಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಎರಡನೇ ದಿನದ ಸ್ಪರ್ಧೆಯಲ್ಲಿ ಅಂಡರ್ 17 ಬಾಲಕಿಯರ ವಿಭಾಗದ 4 x 100 ಫ್ರಿಸ್ಟೈಲ್ ರಿಲೇ ಈಜುಸ್ಪರ್ಧೆಯಲ್ಲಿ ಮಂಗಳಾ ಈಜು ಕ್ಲಬ್ ನ ಸದಸ್ಯೆ ಕು| ಪೂರ್ವಿ ಎಂ. ಇವರು ಕಂಚಿನ ಪದಕವನ್ನು ಗಳಿಸಿರುತ್ತಾರೆ.


ಇವರು ಲೇಡಿಹಿಲ್ ವಿಕ್ಟೋರಿಯಾ ಪ್ರೌಢಶಾಲೆ, ಮಂಗಳೂರು ಇಲ್ಲಿನ ವಿದ್ಯಾರ್ಥಿನಿಯಾಗಿರುತ್ತಾರೆ. ಇವರು ಕ್ಲಬ್ಬಿನ ಹಿರಿಯ ಈಜು ತರಬೇತುದಾರರಾದ ಶ್ರೀ ಎಂ. ಶಿವಾನಂದ ಗಟ್ಟಿ ಇವರ ಮಾರ್ಗದರ್ಶನದಲ್ಲಿ ಮುಖ್ಯ ತರಬೇತುದಾರರಾದ ಶ್ರೀ ಶಿಶಿರ್ ಎಸ್. ಗಟ್ಟಿ (ಎನ್.ಐ.ಎಸ್), ತರಬೇತುದಾರರಾದ ಶ್ರೀ ಕೀರ್ತನ್ ಎಸ್. ಶೆಟ್ಟಿ, ಶ್ರೀ ಚೇತನ್ ಎಸ್. ಶೆಟ್ಟಿ, ಶ್ರೀ ರಾಜೇಶ್ ಖಾರ್ವಿ ಬೆಂಗ್ರೆ ಹಾಗೂ ಶ್ರೀ ಪ್ರಥಮ್ ಕುಂದರ್ ಇವರಿಂದ ಎಮ್ಮೆಕೆರೆ ಸ್ಮಾರ್ಟ್ ಸಿಟಿ ಅಂತರಾಷ್ಟ್ರೀಯ ಈಜು ಕೊಳ ಹಾಗೂ ಮಂಗಳೂರು ಮಹಾನಗರಪಾಲಿಕೆ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments