ತೋಕೂರು : ನ.27ರಂದು ಆಯುಷ್ ಅರಿವು ಕಾರ್ಯಕ್ರಮ, ಮಕ್ಕಳಿಗೆ ಲಿವರ್ ಟಾನಿಕ್ ಹಾಗೂ ಚವನಪ್ರಾಶ ವಿತರಣೆ ಕಾರ್ಯಕ್ರಮ
ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ , ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೊಜನೆ ಮಂಗಳೂರು ಗ್ರಾಮಾಂತರ, ಗ್ರಾಮ ಪಂಚಾಯತ್ ಪಡುಪಣಂಬೂರು, ಶ್ರೀ ಸುಬ್ರಹ್ಮಣ್ಯ ಅಂಗನವಾಡಿ ಕೇಂದ್ರ ತೋಕೂರು ಇವರ ಸಹಯೋಗದಲ್ಲಿ ಫೇಮಸ್‌ಯೂತ್ ಕ್ಲಬ್(ರಿ) ಮತ್ತು ಮಹಿಳಾ ಮಂಡಲ, 10ನೇ ತೋಕೂರು, ಹಳೆಯಂಗಡಿ ವತಿಯಿಂದ ಡಾ.ಶೋಭಾ ರಾಣಿ ವೈದ್ಯಾಧಿಕಾರಿಗಳು ಆಯುಷ್ ಇಲಾಖೆ ಸರಕಾರಿ ಆಯುರ್ವೇದ ಚಿಕಿತ್ಸಾಲಯ ಆರೋಗ್ಯ ಮತ್ತು ಕ್ಷೇಮ ಮಂದಿರ ಕೊಲ್ಲೂರು ಬಳ್ಕುಂಜೆ ಇವರಿಂದ ಆಯುಷ್ ಅರಿವು ಕಾರ್ಯಕ್ರಮ, ಮಕ್ಕಳಿಗೆ ಲಿವರ್ ಟಾನಿಕ್ ಹಾಗೂ ಚವನಪ್ರಾಶ ವಿತರಣೆ ಕಾರ್ಯಕ್ರಮವು ನ.27ರಂದು ಬೆಳಿಗ್ಗೆ 11.30ಕ್ಕೆ ಫೇಮಸ್ ಯೂತ್ ಕ್ಲಬ್‌ನ ಕಾರ್ಯಾಲಯದಲ್ಲಿ ನಡೆಯಲಿದೆ.