ನಾಳೆ ಮಂಗಳೂರಿನ ವಿವಿಧೆಡೆ ವಿದ್ಯುತ್ ವ್ಯತ್ಯಯ

ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಮಂಗಳೂರಿನ ವಿವಿಧೆಡೆ ಜೂ.12ರಂದು ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
ಜೂ.12ರಂದು ಬೆಳಗ್ಗೆ 1000 ಅಪರಾಹ್ನ 3ರವರೆಗೆ 110/33/11 ಕೆವಿ ಬಿಜೈ ಉಪಕೇಂದ್ರದಿಂದ ಹೊರಡುವ 11 ಕೆವಿ ದಡ್ಡಲ್ ಕಾಡ್ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಸಿ.ಎ.ಪಿ.ಎಲ್ ಕಾಲೇಜು ಸುತ್ತಮುತ್ತ, ದಡ್ಡಲ್ ಕಾಡ್ ಜಂಕ್ಷನ್, ಕೋಟೆಕಣಿ ರಸ್ತೆ ಸುತ್ತಮುತ್ತ ಕೊಟ್ಟಾರ ಚೌಕಿ ಐಡಿಯಲ್ ಘಟಕ, ಕರ್ನಾಟಕ ಏಜೆನ್ನಿ ದಾಮೊ ಘಟಕ, ಗಣಪತಿ ದೇವಸ್ಥಾನ ಉರ್ವಸ್ಟೋರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಜೂ.12ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ 110/33/11 ಕೆವಿ ನೆಹರೂಮೈದಾನ ಉಪಕೇಂದ್ರದಿಂದ ಹೊರಡುವ 11 ಕೆವಿ ಅನ್ಸಾರಿ, 11ಕೆವಿ ಪಾಂಡೇಶ್ವರ, 11ಕೆವಿ ಎಂ.ಪಿ.ಟಿ, 11ಕೆವಿ ವೆನ್ 5. 1182 2, 1162 ?, 1162 ಮಾರ್ಕೆಟ್, 11ಕೆವಿ ವಿವೇಕ್ ಮೋಟಾರ್ಸ್ ಮತ್ತು 11 ಕೆವಿ ಹಂಪನಕಟ್ಟೆ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ನೆಲ್ಲಿಕಾಯಿ ರೋಡ್, ಸ್ಟೇಟ್ ಬ್ಯಾಂಕ್, ಕಮಿಷನರ್ ಆಫೀಸ್, ಎ.ಬಿ.ಶೆಟ್ಟಿ ಸರ್ಕಲ್, ಮಂಗಳಾದೇವಿ ರಸ್ತೆ, ರೊಸಾರಿಯೋ, ರಾಜಲಕ್ಷ್ಮಿ ಟೆಂಪಲ್, ಮಹಾಲಿಂಗೇಶ್ವರ ಟೆಂಪಲ್ ರಸ್ತೆ, ಪಾಂಡೇಶ್ವರ ಕಟ್ಟೆ ಫೈಸೇಲ್ಸ್, ಅಮೃತನಗರ, ಪಾಂಡೇಶ್ವರ ನ್ಯೂರಸ್ತೆ, ಕಸಾಯಿ ಗಲ್ಲಿ ಗಾಂಧಿ ಸನ್ಸ್, ಬೀಬಿ ಅಲಾಬಿ ರಸ್ತೆ
ಬಂದರ್, ಪೋಲೀಸ್ ಸ್ಟೇಷನ್, ಮಿಷನ್ ಸ್ಟ್ರೀಟ್, ಗೋಳಿ ಕಟ್ಟೆ ಬಜಾರ್, ಬಾಂಬೆ ಲಕ್ಕಿ ಹೋಟೆಲ್, ಟಿ.ಟಿ ರಸ್ತೆ, ಜೈನ್ ಬಸ್ತಿ, ನೂರ್ ಮೊಹಮ್ಮದ್, ವೆನ್ಸಾಕ್, ಲೇಡಿಗೋಷನ್ ಬಳಿ, ಸಿಟಿ ಪ್ರೆಸ್, ಲೋವರ್ ಕಾರ್‌ಸ್ಟ್ರೀಟ್, ನೆಲ್ಲಿಕಾಯಿ ರಸ್ತೆ ಮೆಡಿಕೇರ್ ಕಾಂಪ್ಲೆಕ್ಸ್, ಅಜೀಜುದ್ದೀನ್ ರಸ್ತೆ, ಛೇಂಬರ್ ರಸ್ತೆ, ಕಂಡತ್ ಪಳ್ಳಿ ಡಿ.ಸಿ ಆಫೀಸ್, ಉಪಧಕ್ಕೆ ಪೋರ್ಟ್ ರೋಡ್ ರಸ್ತೆ, ಧಕ್ಕೆ ನೀರೇಶಲ್ಯ, ರಸ್ತೆ, ಗೂಡ್ ಶೆಡ್ ರಸ್ತೆ, ಬದ್ರಿಯಾ, ಒಲ್ಡ್ ಪೋರ್ಟ್, ಬಿ.ಎಂ. ಕ್ರಾಸ್ ರೋಡ್, ಮಾರ್ಕೆಟ್ ರಸ್ತೆ, ಹೊಟೇಲ್ ಶ್ರೀನಿವಾಸ್, ಕಿಲ್ಲೆ ಕೋರ್ಟ್, ಮೋಹಿನಿ ವಿಲಾಸ್, ಜಿ.ಹೆಚ್.ಎಸ್ ರಸ್ತೆ, ಜ್ಯುವೆಲ್ಲರಿ ರಸ್ತೆ, ಗೌರಿಮಠ ರಸ್ತೆ, ಭವಂತಿ ಸ್ಪೀಟ್, ನಂದಾದೀಪ್, ಶಾಂತದುರ್ಗ, ಪಿ.ಎಂ.ರಾವ್ ರಸ್ತೆ, ವಿವೇಕ್ ಮೋಟಾರ್ಸ್, ಜುಲೇಖ ಟ್ರಸ್ಟ್, ಏರ್ ಲೈನ್ಸ್ ಮೈದಾನ, 3ನೇ ಕ್ರಾಸ್, ಹೊಟೇಲ್ ಹರಿಕಿರಣ್, ಸರ್ವಿಸ್ ಬಸ್‌ಸ್ಟ್ಯಾಂಡ್, ಮೈದಾನ 4ನೇ ಕ್ರಾಸ್, ಜಿಲ್ಲಾ ಪಂಚಾಯತ್, ಮಿನಿ ವಿಧಾನ ಸೌಧ, ಐಡಿಯಲ್ ಐಸ್ ಕ್ರೀಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಜೂ.12ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ 33/11ಕೆವಿ ಕಂಕನಾಡಿ ಉಪಕೇಂದ್ರದಿಂದ ಹೊರಡುವ 1182 2 112 ಮಾದರಿ ಉಪವಿಭಾಗದ ಯೋಜನೆಯಡಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಹೈಲ್ಯಾಂಡ್, ಯುನಿಟಿ ಆಸತ್ರೆ, ಸೈಂಟ್ ಮೆರೀಸ್ ಸ್ಕೂಲ್, ವಾಸ್ನಲೀನ್, ಬಲ್ಮಠ ಮಿಷನ್ ಕಂಪೌಂಡ್, ಬಲ್ಮಶ ನ್ಯೂ ರೋಡ್, ಅಥೆನಾ ಹಾಸ್ಪಿಟಲ್, ಕಂಕನಾಡಿ ಬೈಪಾಸ್ ರಸ್ತೆ, ಕಲ್ಪನಾ ರೋಡ್, ಬೆಂದೂರ್‌ವೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
