ಕುರುಡು ಮಲೈನಲ್ಲಿ ಜ.3 ರಿಂದ ಡಿ.ಕೆ. ಶಿವಕುಮಾರ್ ಅವರ ಎರಡನೇ ಹಂತದ “ಪ್ರಜಾಧ್ವನಿ” ಯಾತ್ರೆ : ಪೂರ್ವ ಸಿದ್ಧತಾ ಸಭೆ ನಡೆಸಿದ ಮಾಜಿ ಸಚಿವ ಎಂ.ಆರ್. ಸೀತಾರಾಂ

ಬೆಂಗಳೂರು, ಜ, 30; ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೋಲಾರ ಜಿಲ್ಲೆಯ ಮುಳಬಾಗಿಲು ಸಮೀಪದ ಕುರುಡು ಮಲೈನಲ್ಲಿ ಫೆ. 3 ರಿಂದ ಆರಂಭಿಸಲಿರುವ ಎರಡನೇ ಹಂತದ “ಪ್ರಜಾಧ್ವನಿ” ಯಾತ್ರೆಯ ಯಶಸ್ಸಿಗಾಗಿ ಮಾಜಿ ಸಚಿವ ಎಂ.ಆರ್. ಸೀತಾರಾಂ ಇಂದು ಪೂರ್ವಭಾವಿ ಸಭೆ ನಡೆಸಿದರು.

ಎಂ.ಅರ್. ಸೀತಾರಾಂ ಅವರನ್ನು ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಉಸ್ತುವಾರಿ ಉಪಾಧ್ಯಕ್ಷರನ್ನಾಗಿ ಡಿ.ಕೆ. ಶಿವಕುಮಾರ್ ಅವರು ನೇಮಿಸಿದ್ದು, ಈ ಹಿನ್ನೆಲೆಯಲ್ಲಿ ಅವರು “ಪ್ರಜಾಧ್ವನಿ” ಯಶಸ್ಸಿಗಾಗಿ ಮಹತ್ವದ ಸಮಾಲೋಚನೆ ನಡೆಸಿದರು.

ಕಾರ್ಯಕ್ರಮದ ರೂಪರೇಷೆ, ಜಿಲ್ಲೆಯಲ್ಲಿ ಸಾಗಲಿರುವ ಯಾತ್ರೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸಿದ್ಧತೆ ಕುರಿತು ಎಂ.ಆರ್. ಸೀತಾರಾಂ ಸುದೀರ್ಘವಾಗಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೊತ್ತೂರು ಮಂಜು, ಸ್ಥಳೀಯ ಮುಖಂಡರು, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.

Related Posts

Leave a Reply

Your email address will not be published.