ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆಗೆ ಅಖಿಲ ಭಾರತೀಯ ಸಂತ ಸಮಿತಿಯಿಂದ ಖಂಡನೆ

ಇತ್ತೀಚಿನ ದಿನಗಳಲ್ಲಿ ಹಿಂದೂ ಯುವಕರ ಹತ್ಯೆಗಳು ಪದೇ ಪದೇ ನಡೆಯುತ್ತಿದೆ. ಹಿಂದೂ ಯುವಕರನ್ನೇ ಗಮನದಲ್ಲಿಟ್ಟು ಹತ್ಯೆ ಮಾಡುತ್ತಿರುವುದು ಗಂಭೀರವಾದ ವಿಷಯ. ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಿರುವುದಕ್ಕೆ ಅಖಿಲ ಭಾರತೀಯ ಸಂತ ಸಮಿತಿ ಖಂಡನೆ ವ್ಯಕ್ತಪಡಿಸಿದೆ.
ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಅವರು, ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಿರುವುದು ಖಂಡನೀಯ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಹಿಂದೂ ಜನಾಂಗದ ರಕ್ಷಣೆಗಾಗಿ ಸಿಎಂ ಹಾಗೂ ರಾಜ್ಯಪಾಲರು, ಪ್ರಧಾನಿ ಮೋದಿ ರಾಷ್ಟ್ರಪತಿಗಳಿಗೆ ಸಂತ ಸಮಿತಿಯ ವತಿಯಿಂದ ಮನವಿಯನ್ನು ಕಳುಹಿಸಿಕೊಡಲಾಗುವುದು ಎಂದು ಹೇಳಿದರು. ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಸಂತ ಸಮಿತಿಯ ಓಂ ಶ್ರೀ ಮಠದ ಶಿವ ಜ್ಞಾನಮಹಿ ಸರಸ್ವತಿ, ಸಂಘಟನ ಸೆಕ್ರೆಟರಿ ಉಡುಪಿ ದ್ವಾರಕಾಮಹಿಮಠದ ಸ್ವಾಮೀ ಸಾಯಿ ಈಶ್ವರ್ ಗುರೂಜಿ ಮಹಾಬಲೇಶ್ವರ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.
