HomeFresh Newsಪಂಪ್‍ವೆಲ್ ಬಸ್ಸು ನಿಲುಗಡೆಯಾಗುವ ಸಮೀಪದ ರಸ್ತೆಯಲ್ಲಿ ಬಿರುಕು ಭಾರೀ ಪ್ರಮಾಣದಲ್ಲಿ ನೀರು ಪೋಲು

ಪಂಪ್‍ವೆಲ್ ಬಸ್ಸು ನಿಲುಗಡೆಯಾಗುವ ಸಮೀಪದ ರಸ್ತೆಯಲ್ಲಿ ಬಿರುಕು ಭಾರೀ ಪ್ರಮಾಣದಲ್ಲಿ ನೀರು ಪೋಲು

ನಗರದ ಪಂಪ್‍ವೆಲ್ ಬಸ್ಸು ನಿಲುಗಡೆಯಾಗುವ ಸಮೀಪದ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಒಳಗಡೆಯಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಚಿಮ್ಮುತ್ತಿದೆ.
ಬಿರುಕು ಬಿಟ್ಟಿರುವ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ರಸ್ತೆಯಲ್ಲೆಲ್ಲಾ ಹರಿದಾಡುತ್ತಿದೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ರಸ್ತೆಯ ಕೆಳಭಾಗದಲ್ಲಿರುವ ನೀರು ಸರಬರಾಜಿನ ಪೈಪ್ ಒಡೆದಿದ್ದರಿಂದ ರಸ್ತೆ ಮಧ್ಯೆ ಬಿರುಕು ಮೂಡಿದೆ ಎನ್ನಲಾಗುತ್ತಿದೆ.ಪಂಪ್‍ವೆಲ್ ಮೇಲ್ಸೇತುವೆಯ ಕೆಳಭಾಗದಿಂದ ಕಂಕನಾಡಿಯಿಂದ ಪಡೀಲ್‍ಗೆ ಹೋಗುವ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಇನ್ನು ಸ್ಥಳಕ್ಕೆ ಮಂಗಳೂರು ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಮಂಗಳೂರು ಪಾಲಿಕೆಯ ಕಾರ್ಪೋರೇಟರ್ ಪ್ರವೀಣ್‍ಚಂದ್ರ ಆಳ್ವ, ಮಾಜಿ ಎಂಎಲ್‍ಸಿ ಐವನ್ ಡಿಸೋಜ ಅವರು ಭೇಟಿ ನೀಡಿ ಪರಿಶೀಲಿಸಿದರು
.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments