ವಿಕಲ ಚೇತನರ ಸಾಧನ ಸಲಕರಣೆ ವಿತರಣಾ ಕಾರ್ಯಕ್ರಮ

ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಅಲಿಮ್ಕೊ ಸಂಸ್ತೆ ಬೆಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬೆಳ್ತಂಗಡಿ ವತಿಯಿಂದ ವಿಕಲ ಚೇತನರ ಸಾಧನ ಸಲಕರಣೆ ವಿತರಣಾ ಕಾರ್ಯಕ್ರಮ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ ರವರು ವಿಕಲ ಚೇತನರ ಶ್ರೆಯಾಭಿವೃದ್ದಿ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಮ್ಮ ತಾಲೂಕಿನಲ್ಲಿ ಹಮ್ಮಿ ಕೊಳ್ಳಲಾಗಿದೆ

.ಈಗಾಗಲೇ ಬೆಳ್ತಂಗಡಿ ತಾಲೂಕಿನಲ್ಲಿ ಸುಮಾರು 1500ಕಾರ್ಡುಗಳನ್ನು ವಿತರಿಸಿದ್ದೇವೆ.ಅಲ್ಲದೆ 4ವರ್ಷದ ಅಂತರದಲ್ಲಿ 45 ಜನರಿಗೆ 4 ಚಕ್ರದ ಸ್ಕೂಟರ್ ಗಳನ್ನೂ ವಿತರಿಸಲಾಗಿದೆ.ಈ ವರ್ಷದಲ್ಲಿ 12 ಲಕ್ಷದ ಅನುದಾನದಲ್ಲಿ ಉಳಿದ ವಿಕಲ ಚೇತನರಿಗೆ ಸಲಕರಣೆ ವಿತರಿಸಲಾಗುತ್ತದೆ,ಈ ಮೂಲಕ ವಿಕಲ ಚೇತನರಿಗೆ ಪ್ರಾಮಾಣಿಕವಾಗಿಸಲಕರಣೆಗಳನ್ನು ವಿತರಣೆ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.