HomeFresh Newsಪುತ್ತೂರು: ಗುತ್ತಿಗೆದಾರ ವಿಜಯ್ ಕುಮಾರ್  ಆತ್ಮಹತ್ಯೆ

ಪುತ್ತೂರು: ಗುತ್ತಿಗೆದಾರ ವಿಜಯ್ ಕುಮಾರ್  ಆತ್ಮಹತ್ಯೆ

ಪುತ್ತೂರು: ಪಾಣಾಜೆ ಗ್ರಾಮದ ಆರ್ಲಪದವು ನಿವಾಸಿ, ಮೇಸ್ತ್ರಿ ಕಂ ಗುತ್ತಿಗೆದಾರ ವಿಜಯ್ ಕುಮಾರ್ (38 ವ.) ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾನುವಾರ ಪುತ್ತೂರಿನಲ್ಲಿ ನಡೆದ ಮರಾಟಿ ಸಂಘದ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವಿಜಯ್ ಕುಮಾರ್ ಅವರಿಗೆ ವಿವಾಹ ನಡೆಸಲು ಮನೆಯವರು ಸಿದ್ಧತೆ ನಡೆಸಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತರು ತಂದೆ ಶಿವಪ್ಪ ನಾಯ್ಕ, ತಾಯಿ ಲಲಿತಾ, ಅಣ್ಣ, ಅಕ್ಕ, ಕುಟುಂಬಸ್ಥರನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments