ಮೂಡುಬಿದಿರೆ: ಹಿರೇ ಅಮ್ಮನವರ ಬಸದಿ ಧಾಮ ಸಂಪ್ರೋಕ್ಷಣೆ-ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಡುಬಿದಿರೆ: ಇಲ್ಲಿನ ಜೈನಪೇಟೆಯಲ್ಲಿರುವ ಹಿರೇ ಅಮ್ಮನವರ ಬಸದಿಯನ್ನು ಜೀರ್ಣೋದ್ಧಾರಗೊಳಿಸಲಾಗಿದ್ದು, ಧಾಮ ಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ರಥೋತ್ಸವದ ಆಮಂತ್ರಣ ಪತ್ರಿಕೆಯನ್ನು ಜೈನ ಮಠದಲ್ಲಿ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಂಗಳವಾರ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಸ್ವಾಮೀಜಿ ಅವರು, ಹಿರೇ ಬಸದಿಯು ಅತ್ಯಂತ ಪ್ರಾಚೀನ ಬಸದಿಯಾಗಿದೆ. 24 ತೀರ್ಥಂಕರರ ಲೆಪ್ಪದ ಮೂರ್ತಿಗಳನ್ನು ಹೊಂದಿರುವ ಅಪರೂಪದ ಬಸದಿಯಾಗಿದೆ. ಇದನ್ನು ಪೂರ್ಣ ರೂಪದಲ್ಲಿ ಜೀರ್ಣೋದ್ಧಾರಗೊಳಿಸಿರುವುದು ಶ್ಲಾಘನೀಯ ಎಂದರು.

ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಕೆ.ಅಭಯಚಂದ್ರ ಜೈನ್, ಉಪಾಧ್ಯಕ್ಷ, ಚೌಟರ ಅರಮನೆಯ ಕುಲದೀಪ ಎಂ., ರಾಜೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜವರ್ಮ ಬೈಲಂಗಡಿ, ಆಡಳಿತದಾರರಾದ ಆನಂತಕೇಸರಿ, ವಾಸ್ತುತಜ್ಞ ಡಾ.ಸುದರ್ಶನ್, ಪುರೋಹಿತ ಗುಣವರ್ಮ ಇಂದ್ರ ಉಪಸ್ಥಿತರಿದ್ದರು.

Related Posts

Leave a Reply

Your email address will not be published.