ಮೂಡುಬಿದಿರೆ: ಕಿಡ್ನಿ ವೈಫಲ್ಯ, ಚಿಕಿತ್ಸೆಗೆ ಸ್ಪಂದಿಸಿದ ಸಾಯಿ ಮಾರ್ನಾಡ್ ಸೇವಾ ಸಂಘ
ಮೂಡುಬಿದಿರೆ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಾರ್ಪಾಡಿ ಗ್ರಾಮದ ಕಲ್ಲಬೆಟ್ಟು ನಿವಾಸಿ ಸತೀಶ್ ಪೂಜಾರಿ ಅವರಿಗೆ ಡಯಾಲಿಸಿಸ್ ನ ವೆಚ್ಚಕ್ಕಾಗಿ ಸಾಯಿ ಮಾರ್ನಾಡ್ ಸೇವಾ ಸಂಘ(ರಿ) ರೂ.10,000 ಸಹಾಯಧನವನ್ನು ನೀಡಿ ಸ್ಪಂದಿಸಿದೆ.
ಸತೀಶ್ ಅವರ ಎರಡೂ ಕಿಡ್ನಿಗಳು ವೈಫಲ್ಯ ಹೊಂದಿದ್ದು ವಾರಕ್ಕೊಮ್ಮೆ ಡಯಾಲಿಸಿಸ್ ಮಾಡಬೇಕಾಗಿದ್ದು ಒಮ್ಮೆಗೆ ಚಿಕಿತ್ಸೆಗೆ 3ರಿಂದ 4 ಸಾವಿರದಷ್ಟು ವೆಚ್ಚವಾಗುತ್ತದೆ. ತೀರ ಬಡತನದಲ್ಲಿರುವ ಈ ಕುಟುಂಬಕ್ಕೆ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಕಷ್ಟ ಸಾಧ್ಯವಾಗಿದೆ.
ಹೆಂಡತಿ ಟೈಲರಿಂಗ್ ವೃತ್ತಿಯನ್ನು ಮಾಡುತ್ತಿದ್ದು ಪುಟ್ಟ ಇಬ್ಬರು ಮಕ್ಕಳಿದ್ದಾರೆ.
ಇವರ ಕುಟುಂಬದ ಅಸಹಾಯಕ ಪರಿಸ್ಥಿತಿಯನ್ನು ಕಂಡು ಮನ ಕರಗಿರುವ ಸಾಯಿ ಮಾರ್ನಾಡ್ ತಂಡದ ಸದಸ್ಯರು ಸಹಾಯಹಸ್ತವನ್ನು ನೀಡಿ ನೆರವಾಗಿದ್ದಾರೆ.