HomeFresh Newsಇಂದಿರಾ ಕ್ಯಾಂಟೀನ್ ನಲ್ಲಿ ಇಡ್ಲಿ ಸಾಂಬಾರ್ ಸವಿದ‌ ಪುತ್ತೂರು ಶಾಸಕ…

ಇಂದಿರಾ ಕ್ಯಾಂಟೀನ್ ನಲ್ಲಿ ಇಡ್ಲಿ ಸಾಂಬಾರ್ ಸವಿದ‌ ಪುತ್ತೂರು ಶಾಸಕ…

ಪುತ್ತೂರು : ಶಾಸಕ ಅಶೋಕ್ ಕುಮಾರ್ ರೈ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಇಂದಿರಾ ಕ್ಯಾಂಟೀನ್ ಗೆ ದಿಢೀರ್ ಭೇಟಿ ನೀಡಿ ಇಡ್ಲಿ ಸಾಂಬಾರು ಸವಿದಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ತನ್ನ ಕಛೇರಿಗೆ ಬಂದಿದ್ದ ಶಾಸಕರು ನೇರವಾಗಿ ಇಂದಿರಾ ಕ್ಯಾಂಟೀನ್ ಗೆ ತೆರಳಿ ಇಡ್ಲಿ ಸಾಂಬಾರು ಸವಿದಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಮತ್ತು ದೊಡ್ಡ ಮಟ್ಟದ ಉದ್ಯಮಿಯೂ ಆಗಿರುವ ಶಾಸಕ ಅಶೋಕ್ ಕುಮಾರ್ ರೈ ಇಂದಿರಾ ಕ್ಯಾಂಟೀನ್ ನಲ್ಲಿ ತಿಂಡಿ ಸವಿದಿರುವುದು ಹಲವರಿಗೆ ಅಚ್ಚರಿಯನ್ನೂ ಮೂಡಿಸಿದೆ. ಇಂದಿರಾ ಕ್ಯಾಂಟೀನ್ ಅಂದರೆ ಇರಿಸುಮುರಿಸು ಪಡುವ ಜನರ ನಡುವೆ ಯಾವುದೇ ಅಹಂ ಇಲ್ಲದೆ ಕ್ಯಾಂಟೀನ್ ನಲ್ಲಿ ನಿಂತು ಇಡ್ಲಿ ಸಾಂಬಾರು ಸವಿದ ಶಾಸಕರ ಫೋಟೋ-ವಿಡಿಯೋ ಸಾಮಾಜಿಲ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಾಮಾನ್ಯ ವ್ಯಕ್ತಿ ಇಂದಿರಾ ಕ್ಯಾಂಟೀನ್ ಅಥವಾ ಇನ್ಯಾವುದೋ ಗೂಡಂಗಡಿಗಳಲ್ಲಿ ಕುಳಿತು ತಿಂಡಿಯೋ, ಅನ್ನವೋ ಸೇವಿಸಿದರೆ ಅದು ಕಾಮನ್ ಆಗುತ್ತದೆ. ಆದರೆ ಜನಪ್ರತಿನಿಧಿಗಳು ಇಂತಹ ಸಣ್ಣ ಸಣ್ಣ ವ್ಯವಸ್ಥೆಯ ಬಳಿ ತೆರಳಿ ತಿಂಡಿ ಸವಿಯೋದು ಕೊಂಚ ಅಪರೂಪವೇ ಆಗಿದ್ದು, ಈ ನಿಟ್ಟಿನಲ್ಲಿ ಶಾಸಕ ಅಶೋಕ್ ಕುಮಾರ್ ರೈ ತನ್ನ ಹೈಫೈ ಲೈಫ್ ಸ್ಟೈಲ್ ಬಿಟ್ಟು, ಸಿಂಪಲ್ ಆಗಿ ಗುರುತಿಸಿಕೊಂಡಿದ್ದು ವಿಶೇವಾಗಿತ್ತು.

ಅಧಿಕಾರ, ಸ್ಟೇಟಸ್ ಸಿಕ್ಕಿದ ಬಳಿಕ ಜನರ ಹಾವಭಾವದಲ್ಲಿ ಹಲವು ವೆತ್ಯಾಸಗಳಾಗೋದು ಸಾಮಾನ್ಯವಾಗಿದೆ. ಆದರೆ ಕೆಲವು ಮಂದಿ ಇಂತಹ ವ್ಯಕ್ತಿಗಳಿಂದ ಕೊಂಚ ಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ. ಅಂದಹಾಗೆ ಶಾಸಕ ಅಶೋಕ್ ಕುಮಾರ್ ರೈ ಇಂದಿರಾ ಕ್ಯಾಂಟೀನ್ ಭೇಟಿ ನೀಡಿ ತಿಂಡಿ ಸವಿಯುವ ಜೊತೆಗೆ ಕ್ಯಾಂಟೀನ್ ನ ವ್ಯವಸ್ಥೆಯನ್ನೂ ಪರಿಶೀಲಿಸುವ ಮೂಲಕ ಕರ್ತವ್ಯವನ್ನೂ ಮೆರೆದಿದ್ದಾರೆ.

sudha add new -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments