HomeFresh Newsಪುತ್ತೂರು ನಗರಸಭೆ ಸದಸ್ಯ ರಮೇಶ್ ರೈ ನಾಪತ್ತೆ

ಪುತ್ತೂರು ನಗರಸಭೆ ಸದಸ್ಯ ರಮೇಶ್ ರೈ ನಾಪತ್ತೆ

ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆ ಕೆಳಭಾಗದಲ್ಲಿ ಬೈಕ್ ಮೊಬೈಲ್ ಶರ್ಟ್ ಮತ್ತು ಚಪ್ಪಲಿ ಅನಾಥವಾಗಿ ಸಿಕ್ಕಿದ್ದು,
ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಅವರ ಸೊತ್ತುಗಳು ಇದಾಗಿದ್ದು,ಇದನ್ನು ಅಲ್ಲಿಟ್ಟು ಕಾಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.


ರಮೇಶ್ ರೈ ಅವರು ಇತ್ತೀಚಿಗೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ,ಅಯ್ಕೆಯಾಗಿದ್ದರು.
ಇಂದು ಬೆಳಿಗ್ಗೆ ಸುಮಾರು 11 ಗಂಟೆಯಿಂದ ಬೈಕ್ ಹಾಗೂ ಸೊತ್ತುಗಳು ಇಲ್ಲಿ ಅನಾಥವಾಗಿ ಕಂಡು ಬಂದಿವೆ ಎಂದು ಸ್ಥಳೀಯರು ಪೋಲೀಸರಿಗೆ ತಿಳಿಸಿದ್ದಾರೆ.


ಸ್ಥಳದಲ್ಲಿ ಸಿಕ್ಕಿದ ಮೊಬೈಲ್ ನಿಂದ ನಂಬರ್ ಪಡೆದು ಪೋನ್ ಮಾಡಿದಾಗ ಇದು ಪುತ್ತೂರು ರಮೇಶ್ ರೈ ಅವರದು ಎಂದು ತಿಳಿದಿದ್ದು,ಮನೆಯವರಿಗೆ ತಿಳಿಸಲಾಗಿದೆ.
ಇದೀಗ ಸ್ಥಳದಲ್ಲಿ ರಮೇಶ್ ರೈ ಅವರ ಕುಟುಂಬದ ಸದಸ್ಯರು ಪೋಲೀಸರು ಹಾಗೂ ಸ್ಥಳೀಯರು ಜಮಾಯಿಸಿದ್ದು ನೇತ್ರಾವತಿ ನದಿಯಲ್ಲಿರುವ ಟ್ಯಾಂಕ್ ನಲ್ಲಿ
, ಸುತ್ತ ಮುತ್ತಲಿನ ಜಾಗದಲ್ಲಿ ಹುಡುಕಲು ಪ್ರಾರಂಭಿಸಿದ್ದಾರೆ.

ಸ್ಥಳದಲ್ಲಿ ಮಾಜಿ ಶಾಸಕ ಮಟಂದೂರು, ಅರುಣ್ ಕುಮಾರ್ ಪುತ್ತಿಲ ಮತ್ತಿರರು ಉಪಸ್ಥಿತರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments