HomeFresh Newsಮುಂಬೈ : ಹೋಟೆಲ್ ಸಾಮ್ರಾಜ್ಯದ ಅಧಿಪತಿ ಸುರೇಶ್ ಎಸ್. ಪೂಜಾರಿ ಪಡುಕೋಣೆ ವಿಧಿವಶ

ಮುಂಬೈ : ಹೋಟೆಲ್ ಸಾಮ್ರಾಜ್ಯದ ಅಧಿಪತಿ ಸುರೇಶ್ ಎಸ್. ಪೂಜಾರಿ ಪಡುಕೋಣೆ ವಿಧಿವಶ

ಎಳೆಯ ವಯಸ್ಸಿನಲ್ಲೇ ಹುಟ್ಟೂರನ್ನು ತೊರೆದು ಕುಟುಂಬದ ಪಾಲನೆಗೆ ದೂರದ ಮಾಯಾ ನಗರಿ ಮುಂಬಯಿಗೆ ತೆರಳಿ ತಮ್ಮ ಸ್ವ ಸಾಮರ್ಥ್ಯದಿಂದ ಸುಖ ಸಾಗರ ಗ್ರೂಪ್ ಆಪ್ ಹೋಟೆಲಿನ ಸಾಮ್ರಾಜ್ಯವನ್ನು ಕಟ್ಟಿ ತಮ್ಮ ದುಡಿಮೆಯ ಬಹುಪಾಲನ್ನು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಬದುಕನ್ನು ಸಮರ್ಪಿಸಿದ ಕೊಡುಗೈ ದಾನಿ ಸುರೇಶ್ ಎಸ್ ಪೂಜಾರಿಯವರು ಇಂದು ಸಂಜೆ 7:40 ಕ್ಕೆ ಮುಂಬೈಯಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ವಯೋಸಹಜವಾಗಿ ನಿಧನರಾಗಿದ್ದಾರೆ.
ಶ್ರೀಯುತರು ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರದ ಗೌರವಾಧ್ಯಕ್ಷರು.ಶ್ರೀ ನಾರಾಯಣಗುರು ಏಜ್ಯುಕೇಶನಲ್&ಕಲ್ಚರಲ್ ಟ್ರಸ್ಟ್ (ರಿ) ಕುಂದಾಪುರದ ಅಧ್ಯಕ್ಷರಾಗಿ ಕಳೆದ 35 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದರು.
ಸಮಾಜದ ಅಶಕ್ತರು ಕೂಡ ಅತ್ಯುತ್ತಮವಾದ ಕಲ್ಯಾಣ ಮಂಟಪದಲ್ಲಿ ವಿವಾಹವನ್ನು ನಡೆಸಬೇಕು ಎಂದು 35 ವರ್ಷಗಳ ಹಿಂದೆಯೇ ಕುಂದಾಪುರದಲ್ಲಿ ಶ್ರೀ ನಾರಾಯಣಗುರು ಕಲ್ಯಾಣ ಮಂಟಪವನ್ನು ನಿರ್ಮಿಸಿ ಬಡವರ ಬೆಳಕಾಗಿದ್ದರು, ವಿಧ್ಯೆಗೆ ಬಹಳಷ್ಟು ಒತ್ತು ನೀಡಿದ್ದ ಅವರು ಬಿಲ್ಲವ ಸಂಘದ ಮೂಲಕ ವಿಧ್ಯಾರ್ಥಿ ವೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು, ಶ್ರೀಯುತರ ನಿಧನ ತುಂಬಲಾರದ ನಷ್ಟವೇ ಸರಿ ಸದಾ ಕಾಲ ಸಮಾಜದ ಅಶಕ್ತರಿಗೆ ನೆರಳಾಗಿ ಬಾಳಿ ಬದುಕಿದ್ದ ಧೀಮಂತ ವ್ಯಕ್ತಿಯಾಗಿದ್ದರು.

add - S.L Shet ..march 2025
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments