HomeFresh Newsಪುತ್ತೂರು: ದ್ವಿತೀಯ ಪಿಯುಸಿ ಫಲಿತಾಂಶ: ಅಪರ್ಣಾ ಅಡಿಗ ರಾಜ್ಯಕ್ಕೆ 7ನೇ ಸ್ಥಾನ

ಪುತ್ತೂರು: ದ್ವಿತೀಯ ಪಿಯುಸಿ ಫಲಿತಾಂಶ: ಅಪರ್ಣಾ ಅಡಿಗ ರಾಜ್ಯಕ್ಕೆ 7ನೇ ಸ್ಥಾನ

ಪುತ್ತೂರಿನ ವಿವೇಕಾನಂದ ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿದ್ದು, ಅಪರ್ಣಾ ಅಡಿಗ ಅವರು ಕಾಲೇಜಿಗೆ ಮೂರನೇ ಸ್ಥಾನ ಪಡೆದು, ರಾಜ್ಯದಲ್ಲಿ 7ನೇ ಸ್ಥಾನವನ್ನು ಪಡೆದು ಹೆಮ್ಮೆ ತಂದಿದ್ದಾರೆ.

ಅಪರ್ಣಾ ಅವರು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ವ್ಯತ್ಯಾಸ ಆದ ಕಾರಣ ಮರು ಮೌಲ್ಯಮಾಪನಕ್ಕೆ ಹಾಕಿದ್ದರು. ಮರು ಮೌಲ್ಯಮಾಪನದ ನಂತರ ಬ್ಯುಸಿನೆಸ್‌ನಲ್ಲಿ 99 ಅಂಕಗಳನ್ನು ಪಡೆದುಕೊಂಡಿದ್ದರು. 593 ಅಂಕ ಪಡೆದು 98.83 ಶೇಕಡಾ ಫಲಿತಾಂಶವನ್ನು ಪಡೆದುಕೊಂಡಿದ್ದು, ಕಾಲೇಜಿಗೆ ಮೂರನೇ ಸ್ಥಾನ ಹಾಗೂ ರಾಜ್ಯದಲ್ಲಿ 7ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಪರ್ಣಾ ಅವರು ಗೋಪಾಲಕೃಷ್ಣ ಅಡಿಗ ಮತ್ತು ಆಶಾ ಅಡಿಗ ಅವರು ಸುಪುತ್ರಿ. ಕಾಸರಗೋಡಿನ ಪೆರ್ಲದ ನಿವಾಸಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments