HomeFresh Newsಸುಳ್ಯ: ಏ.27ರಂದು ಸುಳ್ಯದ ಗೌಡ ಸಮುದಾಯ ಭವನದಲ್ಲಿ ಅರೆಭಾಷೆ ಕಾಮಿಡಿ ರಿಯಾಲಿಟಿ ಶೋ ದ ಎರಡನೇ...

ಸುಳ್ಯ: ಏ.27ರಂದು ಸುಳ್ಯದ ಗೌಡ ಸಮುದಾಯ ಭವನದಲ್ಲಿ ಅರೆಭಾಷೆ ಕಾಮಿಡಿ ರಿಯಾಲಿಟಿ ಶೋ ದ ಎರಡನೇ ಸುತ್ತಿನ ಆಡಿಷನ್

ವಿ4 ನ್ಯೂಸ್ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಎಂ.ಬಿ. ಫೌಂಡೇಶನ್‌ನ ಎಂ.ಬಿ. ಸದಾಶಿವ ಅವರ ಸಾರಥ್ಯದಲ್ಲಿ ಅರೆಭಾಷೆ ಕಾಮಿಡಿ ರಿಯಾಲಿಟಿ ಶೋದ ಎರಡನೇ ಸುತ್ತಿನ ಆಡಿಷನ್ ಏಪ್ರಿಲ್ 27ರಂದು ನಡೆಯಲಿದೆ.

ಈಗಾಗಲೇ ಮೊದಲ ಸುತ್ತಿನ ಆಡಿಷನ್ ಸುಳ್ಯದ ಲಯನ್ಸ್ ಕ್ಲಬ್‌ನಲ್ಲಿ ಯಶಸ್ವಿಯಾಗಿ ನೆರವೇರಿದ್ದು, 10ಕ್ಕೂ ಅಧಿಕ ತಂಡಗಳು ಸ್ಪರ್ಧಿಸಿದ್ದವು. ಇದೀಗ ಎರಡನೇ ಸುತ್ತಿನ ಆಡಿಷನ್ ಏಪ್ರಿಲ್ 27ರ ಭಾನುವಾರದಂದು ಸುಳ್ಯದ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮ ವೀಕ್ಷಣೆಗೆ ಸಾರ್ವಜನಿಕರಿಗೂ ಅವಕಾಶವಿದೆ.

ಈಗಾಗಲೇ ಸಿಪಿಎಲ್- ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-೪ ತುಳು ಕಾಮಿಡಿ ರಿಯಾಲಿಟಿ ಶೋ ಯಶಸ್ವಿಯಾಗಿ ನಡೆದು ಜನಮೆಚ್ಚುಗೆಯನ್ನು ಪಡೆದಿದೆ.ಇದೇ ಮಾದರಿಯಲ್ಲಿ ಅರೆಭಾಷೆ ಕಾಮಿಡಿ(ಹಾಸ್ಯ) ರಿಯಾಲಿಟಿ ಶೋವನ್ನು ನಡೆಸಲು ನಿರ್ಧರಿಸಲಾಗಿದೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ನಟನೆಯ ಸಾಮರ್ಥ್ಯಗಳನ್ನು ಅರೆಭಾಷೆ ಕಲಾವಿದರಿಗೆ ಪರಿಚಯ ಮಾಡುವುದು. ಜೊತೆಗೆ ಅರೆಭಾಷೆಯನ್ನು ಅಕಾಡೆಮಿಯ ಮೂಲಕ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಮತ್ತು ಶಾಲಾ, ಕಾಲೇಜುಗಳಲ್ಲಿ ರಂಗಭೂಮಿ ಚಟುವಟಿಕೆಯ ಮೂಲಕ ಪರಿಚಯಿಸುವುದು ಉದ್ದೇಶ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments