HomeFresh Newsಪುತ್ತೂರಿನ ಪುಷ್ಪರೇಖಾಗೆ ಪಿಎಚ್‍ಡಿ ಪದವಿ.

ಪುತ್ತೂರಿನ ಪುಷ್ಪರೇಖಾಗೆ ಪಿಎಚ್‍ಡಿ ಪದವಿ.

ಪುತ್ತೂರು :ಪುತ್ತೂರು ತಾಲೂಕಿನ ಬಲ್ನಾಡು ನಿವಾಸಿ, ಪ್ರಸ್ತುತ ವಿವಾಹಿತರಾಗಿ ಬೆಂಗಳೂರಿನಲ್ಲಿ ವಾಸವಾಗಿರುವ ಪುಷ್ಪರೇಖಾ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್‍ಡಿ ಪದವಿ ಪ್ರದಾನ ಮಾಡಿ ಗೌರವಿಸಿದೆ. ಪುಷ್ಪರೇಖಾ ಅವರು ರಸಾಯನ ಶಾಸ್ತ್ರ ವಿಭಾಗಕ್ಕೆ ಸಂಬಂಧಿಸಿದಂತೆ ಮಂಗಳೂರು ವಿಶ್ವವಿದ್ಯಾನಿಲಯದ ಕೈಗಾರಿಕಾ ರಸಾಯನ ಶಾಸ್ತ್ರ ವಿಭಾಗದ ಪ್ರಾದ್ಯಾಪಕಿ ಪ್ರೊ. ಬಿ.ಕೆ. ಸರೋಜಿನಿ ಅವರ ಮಾರ್ಗದರ್ಶನದಲ್ಲಿ ರಸಾಯನ ಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸಿ ಮಂಡಿಸಿದ `ಸ್ಟಡೀಸ್ ಆನ್ ಫ್ಯಾಬ್ರಿಕೇಶನ್, ಕ್ಯಾರೆಕ್ಟರೈಸೇಷನ್ ಆಂಡ್ ಓಪ್ಟಿಕಲ್ ಪ್ರಾಪರ್ಟಿಸ್ ಆಫ್ ಡೊಪ್‍ಡ್ ಕೈಟೋಸ್ಯಾನ್ ಆಂಡ್ ಪುಲ್ಲುಲ್ಯಾನ್ ಕೊಂಪೊಸಿಟ್ ಫಿಲ್ಮ್‍ಸ್’ ಎಂಬ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್‍ಡಿ ಪದವಿ ಪ್ರದಾನ ಮಾಡಿದೆ. ಪುಷ್ಪರೇಖಾ ಅವರು ಬಲ್ನಾಡು ನಿವಾಸಿ ಕೊರಗಪ್ಪ ಕುಲಾಲ್ ಮತ್ತು ಇಂದಿರಾ ದಂಪತಿಯ ಪುತ್ರಿ. ಪ್ರಸ್ತುತ ಬೆಂಗಳೂರಿನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿರುವ ಪತಿ ಹೇಮಂತ್ ಕುಮಾರ್ ಕೊಲ್ಯ ಅವರೊಂದಿಗೆ ವಾಸವಾಗಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments