ಬೈಕ್ ನಲ್ಲಿ ಗಾಂಜಾ ಸಾಗಾಟ : ಓರ್ವ ಬಂಧನ, ಇನ್ನೋರ್ವ ಪರಾರಿ

ಉಳ್ಳಾಲ: ಬೈಕಿನಲ್ಲಿ ಗೋಣಿಚೀಲದಲ್ಲಿ ರೂ.40,000 ಮೌಲ್ಯದ ಗಾಂಜಾ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿರುವ ಘಟನೆ ತಲಪಾಡಿ ತಚ್ಚಣಿ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಮಂಜೇಶ್ವರ ಸುಂಕದಕಟ್ಟೆಯ ಮೊಹಮ್ಮದ್ ರಾಝಿಕ್ ಎಂಬಾತನನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಅಸ್ಗರ್ ತಲೆಮರೆಸಿಕೊಂಡಿದ್ದಾನೆ. ಇಬ್ಬರು ತಲಪಾಡಿ ಗ್ರಾಮದ ತಚ್ಚಣಿ ಎಂಬಲ್ಲಿ ಗಾಂಜಾ ಮಾರಾಟ ಮಾಡಲು ಬಂದಿದ್ದರು. ಯಮಹಾ ಖ15 ಬೈಕಿನಲ್ಲಿ ಗೋಣಿಚೀಲದಲ್ಲಿ 4 ಕೆ.ಜಿ ತೂಕದ ರೂ.40,000 ಮೌಲ್ಯದ ಗಾಂಜಾ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಬೈಕ್ ಅಡ್ಡಗಟ್ಟುವ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದಾನೆ. ಬಂಧಿತನಿಂದ ಗಾಂಜಾ ಹಾಗೂ ರೂ.1 ಲಕ್ಷ ಸೇರಿದಂತೆ ಒಟ್ಟು 1,40,000 ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳ ವಿರುದ್ದ ಈ ಹಿಂದೆ ಮಂಜೇಶ್ವರ ,ಕಾಸರಗೋಡು, ಕುಂಬ್ಳೆ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನ , ಗಾಂಜಾ ಮಾರಾಟ ಪ್ರಕರಣಗಳಿವೆ. ಉಳ್ಳಾಲ ಠಾಣೆಯ ಇನ್ಸ್ಪೆಕ್ಟರ್ ಸಂದೀಪ್ ರವರ ಮಾರ್ಗದರ್ಶನದಲ್ಲಿ ಪಿಎಸ್ ಐ ಗಳಾದ ರೆವಣಸಿದ್ದಪ್ಪ, ಪ್ರದೀಪ್ ಟಿ,ಆರ್, ಶಿವಕುಮಾರ್ ಹಾಗು ಸಿಬ್ಬಂದಿಗಳಾದ ರಂಜಿತ್, ಅಶೋಕ,ಅಕ್ಬರ್, ಸಾಗರ, ವಾಸುದೇವ,ಸತೀಶ್, ಚಿದಾನಂದ,ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ
