ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಅಮೃತ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭ ಕಾರ್ಯಕ್ರಮ
ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಅಮೃತ ಮಹೋತ್ಸವ ದ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ ಮತ್ತು ವಿಶ್ವ ಬಂಟರ ಮಾಹಿತಿ ಕೋಶದ ಮಾಹಿತಿ ಸಂಗ್ರಹ ಯೋಜನೆಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಜರುಗಿತ್ತು. ಮಂಗಳೂರಲ್ಲಿ ಸೆ.23 ಮತ್ತು 24ರಂದು ನಡೆಯಲಿರುವ ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಅಮೃತ ಮಹೋತ್ಸವ ದ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ ಮತ್ತು ವಿಶ್ವ ಬಂಟರ ಮಾಹಿತಿ ಕೋಶದ ಮಾಹಿತಿ ಸಂಗ್ರಹ ಯೋಜನೆಯ ಉದ್ಘಾಟನಾ ಸಮಾರಂಭದ ಕಾರ್ಯಕ್ರಮವೂ ಜರುಗಿತ್ತು. ನಗರದ ಬಂಟ್ಸ್ ಹಾಸ್ಟೆಲ್‍ನ ಬಂಟರ ಯಾನೆ ನಾಡವರ ಮಾತೃ ಸಂಘದ ಸಭಾಭವನದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಆಮಂತ್ರಣ ಪತ್ರಿಕೆಯನ್ನು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿ ರಾಜ ರೈ ಹಾಗೂ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶು ಪಾಲರಾದ ಅನಸೂಯ ರೈ ಅವರು ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಪೃಥ್ವಿರಾಜ ರೈ ಅವರು, ಮಾಹಿತಿ ಕೋಶದ ಮಾಹಿತಿ ಸಂಗ್ರಹದಿಂದ ಬಹಳ ಮಂದಿಗೆ ಸಹಕಾರಿಯಾಗಲಿದೆ, ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಾ ಹಾರೈಸಿದರು.
ಬಳಿಕ ಅನಸೂಯ ರೈ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಅವತು ವಹಿಸಿ, ಮಾತನಾಡಿದ್ರೂ. ಬಂಟರ ಸಮಾಜದಲ್ಲಿ ಇನ್ನೂ ಸಾಕಷ್ಟು ಕುಟುಂಬ ಗಳು ಬಡತನ ದಲ್ಲಿದ್ದು ಶಿಕ್ಷಣ,ವೈದ್ಯಕೀಯ ವೆಚ್ಚಸೇರಿದಂತೆ ಮೂಲಭೂತ ಅವಶ್ಯಕತೆ ಗಳನ್ನು ಪೂರೈಸ ಲು ಸಾಧ್ಯ ವಾಗದ ಸ್ಥಿತಿ ಯಲ್ಲಿದೆ.ಇಂತಹ ಕುಟುಂಬ ಗಳಿಗೆ ನೆರವು ನೀಡಲು ಬಂಟರ ಕುಟುಂಬ ಗಳ ಆರ್ಥಿಕ, ಸಾಮಾಜಿಕ ಸ್ಥಿತಿ ಗತಿಗಳ ಸಮೀಕ್ಷೆ ಯ ಅಗತ್ಯವಿದೆ ಎಂದು ಅವರು ಹೇಳಿದರು.
ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಅಮೃತೋತ್ಸವ ಸಮಿತಿಯ ಸಂಚಾಲಕರಾದ ಶಾಲಿನಿ ಶೆಟ್ಟಿ ಅಮೃತೋತ್ಸವದ ಯೋಜನೆ ಗಳ ಬಗ್ಗೆ ತಿಳಿಸಿದರು. ಉತ್ಸವ ಸಮಿತಿಯ ಅಧ್ಯಕ್ಷೆ ವೀಣಾ ಶೆಟ್ಟಿ ಸ್ವಾಗತಿ ಸಿದರು. ಮಾತೃ ಸಂಘದ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ವಂದಿಸಿದರು. ಈ ವೇಳೆ ಮಂಗಳೂರು ತಾಲೂಕು ಸಮಿತಿ ಸಂಚಾಲಕರಾದ ಉಲ್ಲಾಸ್ ಶೆಟ್ಟಿ, ಸಮಾವೇಶ ಸ್ವಾಗತ ಸಮಿತಿ ಅಧ್ಯಕ್ಷವಸಂತ್ ಶೆಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.