HomeFresh Newsಅತಿ ಹೆಚ್ಚು ಶಕ್ತಿ ಉತ್ಪಾದನೆ ಮಾಡುವ ದೇಶ

ಅತಿ ಹೆಚ್ಚು ಶಕ್ತಿ ಉತ್ಪಾದನೆ ಮಾಡುವ ದೇಶ

ರಶಿಯಾ ಅತಿ ಹೆಚ್ಚು ಶಕ್ತಿ ಉತ್ಪಾದನೆಯ ದೇಶವಾಗಿದೆ, ಉತ್ಪಾದನೆ ಮೀರಿ ಅತಿ ಶಕ್ತಿ ಬಳಕೆಯ ದೇಶ ಚೀನಾ, ಶಕ್ತಿ ಕೊರತೆಯಿಂದ ಹೆಚ್ಚು ನಷ್ಟ ಕಾಣುವ ದೇಶ ಭಾರತ.

ಶಕ್ತಿ ಅಳತೆಯನ್ನು ಕ್ವಾಡ್ರಿಲಿಯನ್ ಬಿಟಿಯು ಲೆಕ್ಕದಲ್ಲಿ ಅಳೆಯುತ್ತಾರೆ. ಬಿಟಿಯು ಎಂದರೆ ಬ್ರಿಟಿಷ್ ತರ್ಮಲ್ ಯೂನಿಟ್. ಕ್ವಾಡ್ರಿಲಿಯನ್ ಎಂದರೆ ಒಂದರ ಮುಂದೆ ಹದಿನೈದು ಸೊನ್ನೆ ಹಾಕುವ ಸಂಖ್ಯೆ. ಇದನ್ನು ಕನ್ನಡದಲ್ಲಿ ಅಂತ್ಯ, ಪದ್ಮ ಎಂದು ಹೇಳುತ್ತಾರೆ.

ರಶಿಯಾವು ಸಹಜ ಗಾಳಿ, ಕಲ್ಲಿದ್ದಲು, ಪರಮಾಣು, ಎಣ್ಣೆ ಎಂದು ಎಲ್ಲ ಬಗೆಯ ಶಕ್ತಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಶಕ್ತಿ ಹೆಚ್ಚು ಉತ್ಪಾದನೆಯ ಅತಿ ಲಾಭಕರ ದೇಶಗಳಲ್ಲಿ ಕೆನಡಾ, ಯುಎಸ್‍ಎ ಮುಂದೆ. ಶಕ್ತಿ ಉತ್ಪಾದನೆ ಕೊರತೆಯ ಅತಿ ನಷ್ಟ ಬಾಬತ್ತಿನಲ್ಲಿ ಭಾರತ, ದಕ್ಷಿಣ ಕೊರಿಯಾ ಮುಂದೆ ಇವೆ.

ಹೆಚ್ಚುವರಿ ಶಕ್ತಿ ಉತ್ಪಾದನೆಯ ಮೊದಲ ಹತ್ತು ದೇಶಗಳು. ರಶಿಯಾ 29ಕ್ವಾಬಿಟಿಯು, ಸೌದಿ ಅರೇಬಿಯಾ 15.1 ಕ್ವಾಬಿಟಿಯು, ಆಸ್ಟ್ರೇಲಿಯಾ 11.9 ಕ್ವಾಬಿಟಿಯು, ಕೆನಡಾ 10 ಕ್ವಾಬಿಟಿಯು, ಯುಎಸ್‍ಎ 9 ಕ್ವಾಬಿಟಿಯು, ಇಂಡೋನೇಶಿಯಾ 8.8 ಕ್ವಾಬಿಟಿಯು, ನಾರ್ವೆ 8.3 ಕ್ವಾಬಿಟಿಯು, ಕತಾರ್ 7.6 ಕ್ವಾಬಿಟಿಯು, ಇರಾಕ್ 7 ಕ್ವಾಬಿಟಿಯು, ಯುಎಇ 6.8 ಕ್ವಾಬಿಟಿಯು.

ಚೀನಾವು ಉತ್ಪಾದನೆಗಿಂತ 39.8 ಕ್ವಾಬಿಟಿಯು ಹೆಚ್ಚು ಶಕ್ತಿ ಬಳಸುತ್ತದೆ. ಭಾರತ 15.1 ಕ್ವಾಬಿಟಿಯು ಕೊರತೆ, ಜಪಾನ್ 13.7 ಕ್ವಾಬಿಟಿಯು ಕೊರತೆ. ಅನಂತರದ ಸ್ಥಾನಗಳಲ್ಲಿ ತೆಂಕಣ ಕೊರಿಯಾ, ಜರ್ಮನಿ, ಟರ್ಕಿ, ಇಟೆಲಿ, ಫ್ರಾನ್ಸ್‍ಗಳು ಇವೆ.

Top egg exporting country | Top egg importing country
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments