HomeFresh Newsರಂಗಭಾಸ್ಕರ ಪ್ರಶಸ್ತಿಗೆ ಹಿರಿಯ ನಾಟಕಕಾರ, ತುಳು ಸಾಹಿತಿ, ಸಂಘಟಕ ಪರಮಾನಂದ ಸಾಲ್ಯಾನ್ ಆಯ್ಕೆ

ರಂಗಭಾಸ್ಕರ ಪ್ರಶಸ್ತಿಗೆ ಹಿರಿಯ ನಾಟಕಕಾರ, ತುಳು ಸಾಹಿತಿ, ಸಂಘಟಕ ಪರಮಾನಂದ ಸಾಲ್ಯಾನ್ ಆಯ್ಕೆ

ಮಂಗಳೂರು: ಮಂಗಳೂರಿನ ಪ್ರಸಿದ್ಧ ಕ್ರಿಯಾಶೀಲ ರಂಗತಂಡ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ವರ್ಷಂಪ್ರತಿ ಕೊಡಮಾಡುವ ರಂಗಭಾಸ್ಕರ ಪ್ರಶಸ್ತಿಯನ್ನು ಈ ಬಾರಿ ಪ್ರತಿಭಾನ್ವಿತ ಹಿರಿಯ ನಾಟಕಕಾರ, ತುಳು ಸಾಹಿತಿ, ಸಂಘಟಕ ಶ್ರೀ ಪರಮಾನಂದ ಸಾಲ್ಯಾನ್ ಅವರಿಗೆ ಘೋಷಿಸಲಾಗಿದೆ.

ಶ್ರೀ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ, ರಂಗಕರ್ಮಿ ದಿವಂಗತ ಭಾಸ್ಕರ ನೆಲ್ಲಿತೀರ್ಥ ನೆನಪಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಹಿರಿಯ ನಾಟಕಕಾರ, ತುಳು ಸಾಹಿತಿ, ಸಂಘಟಕ, ರಂಗ ಸುದರ್ಶನ ತಂಡದ ಸಂಸ್ಥಾಪಕ ಶ್ರೀ ಪರಮಾನಂದ ಸಾಲ್ಯಾನ್ ಅವರನ್ನು ಡಾ.ನಾ.ದಾಮೋದರ ಶೆಟ್ಟಿ, ಡಾ.ಮೀನಾಕ್ಷಿ ರಾಮಚಂದ್ರ ಮತ್ತು ಮೆಗಾಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್‌ರವರನ್ನು ಒಳಗೊಂಡ ಸಮಿತಿ ಆಯ್ಕೆ ಮಾಡಿದೆ.

ಪ್ರಶಸ್ತಿ ಸ್ಮರಣಿಕೆ, ನಗದು, ಸನ್ಮಾನ ಪತ್ರ ಮುಂತಾದುವನ್ನು ಒಳಗೊಂಡಿದ್ದು 21-6-2026 ರಂದು ಶ್ರೀಯುತರ ಸ್ವಗೃಹದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ಗೋಪಾಲಕೃಷ್ಣ ಶೆಟ್ಟಿಯವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಗರಿ ಎಂಟರ್ಪ್ರೈಸಸ್ ನ ಶ್ರೀ ಅಗರಿ ರಾಘವೇಂದ್ರ ರಾವ್, ರಂಗಸಂಗಾತಿ ಕಲಾಪೋಷಕರು ಶ್ರೀ ಉಡುಪಿ ವಿಶ್ವನಾಥ ಶೆಣೈ, ಬಂಟರ ಸಂಘದ ಕಾರ್ಯದರ್ಶಿ ಎಂ.ಕರುಣಾಕರ ಶೆಟ್ಡಿ, ಹಿರಿಯ ನಟ ನವೀನ್ ಡಿ ಪಡೀಲ್, ಗೋಪಿನಾಥ್ ಭಟ್, ಸಂತೋಷ್ ಶೆಟ್ಟಿ, ಜಗನ್ನಾಥ ಕಲ್ಲಾಪು, ಮೈಮ್ ರಾಮದಾಸ್, ಕನ್ನಡ ಸಂಸ್ಕೃತಿ ಇಲಾಖೆಯ ಶ್ರೀ ರಾಜೇಶ್ ಬಿ, ಮುಂತಾದವರ ಉಪಸ್ಥಿತಿ ಇರಲಿದೆ.

ಪರಮಾನಂದ ಸಾಲ್ಯಾನ್ ಕಿರು ಪರಿಚಯ- ಮುಂಗಾರು ಮತ್ತು ಹೊಸ ದಿಗಂತ ದಿನ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಣೆ ಮಾಡುತ್ತಾ ಬಿಲ್ಲವರ ವಿಶ್ವವಾಣಿ ಮತ್ತು ಯುವವಾಹಿನಿ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಖ್ಯಾತಿ.

ರಂಗ ಸುದರ್ಶನ, ಪರಮ ಪದ್ಮ ಕಲಾವಿದರು, ಸುದರ್ಶನ್ ಕ್ರಿಯೇಶನ್ಸ್ ಎಂಬ ಸಂಸ್ಥೆಗಳ ನಿರ್ದೇಶಕರಾಗಿ ದುಬೈ, ಅಬುದಾಬಿ ಮಾತ್ರವಲ್ಲದೆ ದೇಶದ ವಿವಿಧ ಕಡೆಗಳಲ್ಲಿ ಕಾರ್ಯಕ್ರಮ ನೀಡಿ ಪ್ರಸಿದ್ದಿ.

ಬಾರೆರ್ ಬೀರೆರ್, ದೇಯಿ, ಅಮ್ಮ ಬತ್ತೆರ್, ಸಿರಿಗಂಧದ ಕರಿಯಜ್ಜೆರ್, ಸಸಿಬಿತ್ಲ್ ಉಳ್ಳಾಯನ ಧರ್ಮ ನಡೆ ಮುಂತಾದ ಸಾಕ್ಷ್ಯ ಚಿತ್ರಗಳು, ಸೇವೆ ಮತ್ತು ನೋವು, ನಾಯೆರ್, ಅರುವದೆ, ಬೂತಲೆ, ಮಸಣ ಮುಂತಾದ ಕಿರುಚಿತ್ರಗಳು, ಮಾಯದ ದೈಯೊಂಗುಲು, ಬಾಲೆಗೊಲಿನ ಭ್ರಾಮರಿ, ಕಡಲ್ ಉರ್ಕರ್ಂಡ್, ಸೀತೆಗ್ ಇತ್ತೆ ಅರ್ಥಾಂಡ್, ಲೀಲೆದ ಬಾಲೆ ಗೋಪಾಲೆ, ಬಲಿದಾನ, ಚೌತಿದ ಚಂದ್ರೆ, ಶನಿದೃಷ್ಟಿ, ಬೃಂದಾ ಮೂಲೆ ತುಳಸಿ, ಪುಟ್ಟುದ ಗುಟ್ಟು, ಪಾಂಚಾಲಿ, ಮಾಯಕದ ಮಾಣಿ, ವರ್ಣ ಯಾವುದು ಕರ್ಣ ನಿನ್ನ? ಶಿವಪ್ರಸಾದ ಬಬ್ಬರ್ಯೆ, ತೆಡಿಲ ಕಿಡಿ, ತಿಗಲೆ ಮಂಜಣೆ, ತಂಕದ ಪೂಂಜೆ, ಅರುವದ ಬೂತಾಲೆ, ಅಬ್ಬ ಅಬ್ಬಕ್ಕನೆ, ಮಡ್ಡಿ ಕಳೆದ್ ಮಡಿ, ಅಮರ್ ಸಿರಿಕುಲು, ಒಂಜಿ ಸಿರಿ ರಡ್ಡ್ ಬೊಂಡ, ದರ್ಪು ದಂಟಿನ ಸಿರಿ, ಉಳ್ಳಾಯೆ ಮಲ್ಲಾಯೆ, ಶಿಲುಬೆ ಮತ್ತು ಗಲಭೆ, ಶಿವದೂತೆ ಗುಳಿಗೆ (ಸಂಭಾಷಣೆ), ಮಸ್ತ್ ಮಸ್ತ್ ಮೋಕೆ, ಮೆಗ್ದಿಗಾದ್, ಸತ್ಯ ತೆರಿಯೆ, ಪುರಲ್, ಒಂಜಿ ರಾತ್ರೆ ಒಂಜಿ ಪಗೆಲ್, ದಯೆ ಪಿದಡಿಯೆ ಹೀಗೆ ನೂರಾರು ಸಾಮಾಜಿಕ, ಐತಿಹಾಸಿಕ ಮತ್ತು ಪೌರಾಣಿಕ ನಾಟಕ, ಕಿರುನಾಟಕ, ಪ್ರಹಸನಗಳನ್ನು ಬರೆದು ನಿರ್ದೇಶನ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments