ಮಂಗಳೂರು ಸಿ.ಎಸ್.ಐ ಸಭಾಪ್ರಾಂತ ಕಛೇರಿಯಲ್ಲಿ ಮಹಿಳೆಗೆ ಕಿರುಕುಳ : ರೇಶ್ಮಾ ಸೋನ್ಸ್ ಅವರಿಂದ ದೂರು

ಮಂಗಳೂರಿನ ಬಲ್ಮಠದಲ್ಲಿರುವ ಸಿ.ಎಸ್.ಐ ,ಕೆ.ಎಸ್.ಡಿ ಸಭಾಪ್ರಾಂತ ಕಛೇರಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಬಿಷಪರ ಕಾರ್ಯದರ್ಶಿಯಾಗಿ ಉದ್ಯೋಗದಲ್ಲಿರುವ ಶ್ರೀಮತಿ ರೇಶ್ಮಾ ಸೋನ್ಸ್ ಎಂಬವರು ತನಗೆ ಕಳೆದ 9 ತಿಂಗಳಿಂದ ದೈಹಿಕ , ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೈಸೂರಿನ ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಪರಶುರಾಮ್ ಹಾಗೂ ಸ್ಟಾನ್ಲಿ ಅವರ ಸಮ್ಮುಖದಲ್ಲಿ ಠಾಣೆಗೆ ಬಂದು ರೇಶ್ಮಾ ಅವರು ದೂರು ನೀಡಿದ್ದಾರೆ.

ಬಲ್ಮಠದ ಸಿ.ಎಸ್.ಐ ಸಭಾಪ್ರಾಂತ ಕಛೇರಿಯಲ್ಲಿ ಬಿಷಪರ ಕಾರ್ಯದರ್ಶಿಯಾಗಿ ಕಳೆದ ಹತ್ತು ವರ್ಷಗಳಿಂದ ಉದ್ಯೋಗದಲ್ಲಿರುವ ತನಗೆ ಕಳೆದ ಒಂದು ವರ್ಷದ ಅವಧಿಯಲ್ಲಿ ಬಿಷಪ್ ಅವರು ಸೇವೆಯಲ್ಲಿ ಇಲ್ಲದ ಅವಧಿಯಲ್ಲಿ ವಿನ್ಸಂಟ್ ಪಾಲನ್ನ ಹಾಗೂ ನೋಯೆಲ್ ಕರ್ಕಡ ಅವರು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ರೇಶ್ಮಾ ಸೋನ್ಸ್ ಅವರು ಪಾಂಡೇಶ್ವರ ಮಹಿಳಾ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ತನ್ನ ತಂದೆ ರೆವೆರೆಂಡ್ ಐ.ಎಲ್. ಸೋನ್ಸ್ ಅವರು ಕೆ.ಎಸ್.ಡಿ.ಯಲ್ಲಿ 41 ವರ್ಷಗಳ ಕಾಲ ಸಭಾಪಾಲಕರಾಗಿ ಸೇವೆ ಸಲ್ಲಿಸಿ 2010 ರಲ್ಲಿ ನಿವೃತ್ತರಾಗಿದ್ದರು. ತನ್ನ ತಂದೆಗೆ ಈ ಸಂಸ್ಥೆಯೊಂದಿಗೆ ಸುದೀರ್ಘ ಬಾಂಧವ್ಯ ಇದ್ದರೂ ತನಗೆ ಅತ್ಯಂತ ಕೆಟ್ಟ ರೀತಿಯಲ್ಲಿ ಕಳೆದ ದೈಹಿಕ , ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ರೇಶ್ವಾ ಅವರು ದೂರಿದ್ದಾರೆ. ನಾನು 200 ದಿನಗಳ ಕಾಲ ಏಕಾಂಗಿಯಾಗಿ ಹೋರಾಟ ಮಾಡಿದರೂ ಯಾವುದೇ ಸ್ಪಂದನೆ ಸಿಗಲಿಲ್ಲ , ಈ ಹಿನ್ನೆಲೆಯಲ್ಲಿ ಮೈಸೂರಿನ ಒಡನಾಡಿ ಸಂಸ್ಥೆಗೆ ದೂರು ನೀಡಿ ಅವರ ಸಹಾಯ ಪಡೆದು ಇದೀಗ ಪೊಲೀಸ್ ಕಂಪ್ಲೇಟ್ ದಾಖಲಿಸಿದ್ದೇನೆ ಎಂದು ರೇಶ್ಮಾ ಅವರು ತಿಳಿಸಿದರು.


ಈ ಪ್ರಕರಣದ ಬಗ್ಗೆ ಮಾತನಾಡಿದ ಮೈಸೂರಿನ ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಪರಶುರಾಮ್ ಹಾಗೂ ಸ್ಟಾನಿ ಅವರು ಇಂತಹ ಘಟನೆ ನಡೆದಾದ ನ್ಯಾಯ ಕೊಡಬೇಕಾದವರು ಕಣ್ಣು ಮುಚ್ಚಿಕುಳಿತುಕೊಂಡದ್ದು ವಿಷಾದನೀಯ . ಈ ಬಗ್ಗೆ ನಾವು ಸಂತ್ರಸ್ಥ ಮಹಿಳೆಯ ಪರವಾಗಿ ನಿಂತು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

Related Posts

Leave a Reply

Your email address will not be published.