ಮಂಗಳೂರು: ರೆ.ಫಾ. ಮೈಕಲ್ ಎಲ್ ಸಾಂತುಮೇಯರ್ ಅವರಿಗೆ ಪಿಹೆಚ್‌ಡಿ ಪ್ರದಾನ

ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಮತ್ತು ಕ್ಯಾಂಪಸ್ ನಿರ್ದೇಶಕರಾದ ರೆವರೆಂಡ್ ಫಾದರ್ ಮೈಕಲ್ ಎಲ್ ಸಾಂತುಮೇಯರ್ ಅವರಿಗೆ ಪಿಹೆಚ್‌ಡಿ ಪದವಿ ಪ್ರದಾನ ಮಾಡಲಾಯಿತು.

ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯವು ಕೆಲಸದಲ್ಲಿ ತೊಡಗಿಕೊಳ್ಳುವುದರ ಕಣ್ಣೋಟಗಳು ಮತ್ತು ಅದು ಸಂಘಟಿತ ನಾಗರಿಕ ವರ್ತನೆಯ ಮೇಲೆ ಬೀರುವ ಪರಿಣಾಮಗಳು ಎಂಬ ಪ್ರಬಂಧಕ್ಕಾಗಿ ಡಾಕ್ಟರ್ ಆಫ್ ಫಿಲಾಸಫಿ ನೀಡಿ ಗೌರವಿಸಿದೆ. ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಶೋಧನಾ ಪ್ರಾಧ್ಯಪಕರಾದ ಡಾ. ಕಾರ್ಮೆಲಿಟಾ ಗೋವಿಯಸ್ ಅವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಅಧ್ಯಯನವನ್ನು ಮಾಡಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಖ್ಯಾತರಾಗಿರುವ ರೆವರೆಂಡ್ ಫಾದರ್ ಮೈಕಲ್ ಸಾಂತುಮಾಯರ್ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರೂ ಆಗಿದ್ದಾರೆ.

Related Posts

Leave a Reply

Your email address will not be published.