ವಿದ್ಯಾರ್ಥಿ ಸೋಮೇಶ್ವರ ಗುರುಮಠ ಬರೆದ ‘ಲವ್ ಇಸ್ ಬ್ಲೈಂಡ್ ಬಟ್ ದ ಲವರ್ಸ್’ ಕೃತಿ ಬಿಡುಗಡೆ

ಉಜಿರೆ, ಫೆ.21: ಎರಡಕ್ಕಿಂತ ಹೆಚ್ಚು ಭಾಷೆಗಳ ಮೇಲೆ ಹಿಡಿತ ಸಾಧಿಸಿಸುವ ದೃಢಸಂಕಲ್ಪ ಮತ್ತು ಅಧ್ಯಯನಶೀಲತೆಯ ನಿರಂತರ ತುಡಿತದೊಂದಿಗೆ ಗುರುತಿಸಿಕೊಂಡಾಗ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶಗಳು ಲಭಿಸುತ್ತವೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಸಾದ್ ಶೆಟ್ಟಿ ಹೇಳಿದರು.

ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ಸೋಮೇಶ್ವರ ಗುರುಮಠ ಬರೆದ ‘ಲವ್ ಇಸ್ ಬ್ಲೈಂಡ್ ಬಟ್ ದ ಲವರ್ಸ್’ ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕನ್ನಡದ ಬಗ್ಗೆ ಪ್ರೀತಿ ಇರಲಿ. ಕನ್ನಡವನ್ನೂ ಕಲಿತುಕೊಂಡು ಇನ್ನುಳಿದ ಭಾಷೆಗಳನ್ನು ಕಲಿಯುವ ಹಂಬಲವೂ ಇರಬೇಕು. ಇಂಗ್ಲಿಷ್ ಅನ್ಯಭಾಷೆ ಎಂದು ಕಲಿಯುವುದನ್ನು ಬಿಟ್ಟರೆ ಮಾಧ್ಯಮಗಳೂ ಸೇರಿದಂತೆ ಇನ್ನಿತರ ವಲಯಗಳಲ್ಲಿ ದೊರೆಯಬಹುದಾದ ಅವಕಾಶಗಳೂ ತಪ್ಪಿಹೋಗುತ್ತವೆ ಎಂದರು
.

ಒಂದು ಭಾಷೆಯಲ್ಲಿ ಹೆಚ್ಚು ಅವಕಾಶ ಸಿಗುತ್ತವೆ ಎಂದಾಗ ಆ ಭಾಷೆಯಲ್ಲಿ ಕಲಿಯುವ ಕಡೆ ಗಮನಹರಿಸಬೇಕು. ಇಂಗ್ಲೀಷ್ ಸಾಹಿತ್ಯಕ್ಕೆ ಸಮನಾಗಿ ಕನ್ನಡ ಸಾಹಿತ್ಯವೂ ಬೆಳೆಯಬೇಕು. ಬೇರೆ ಭಾಷೆಯಲ್ಲೂ ತಮ್ಮ ಬರವಣ ಗೆಯ ಮೂಲಕ ಪ್ರಾದೇಶಿಕತೆಯನ್ನು ಬಿಂಬಿಸಬೇಕು. ಹಾಗಾದಲ್ಲಿ ಸಾಹಿತ್ಯ ಬೆಳವಣ ಗೆ ಕಾಣಲು ಸಾಧ್ಯ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಬರವಣ ಗೆಯಲ್ಲಿ ಹೆಚ್ಚು ರೂಢಿಸಿಕೊಂಡು ಅದರಲ್ಲಿ ಹಿಡಿತ ಸಾಧಿಸಿಸಬೇಕು. ಇಂಗ್ಲೀಷ್‍ನಲ್ಲಿ ಬರವಣ ಗೆಗೆ ಹೆಚ್ಚು ಅವಕಾಶಗಳು ಇರುವುದರಿಂದ ಇಂಗ್ಲೀಷ್‍ನಲ್ಲಿ, ಬರಹವನ್ನು ಬರೆಯಲು ಕಲಿಯಬೇಕು ಎಂದು ಹೇಳಿದರು.ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳ ಸಾಧನೆ ಪ್ರಶಂಸನೀಯ. ಪ್ರತಿಯೊಂದು ವರ್ಷದಲ್ಲೂ ವಿಭಾಗದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯಿಂದ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಮಾಧ್ಯಮಗಳಲ್ಲಿ ಅವಕಾಶಗಳನ್ನು ಪಡೆಯುತ್ತಾ ಹೆಗ್ಗುರುತು ಮೂಡಿಸುತ್ತಾ ಬಂದಿದ್ದಾರೆ ಎಂದು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಡೀನ್ ಡಾ. ವಿಶ್ವನಾಥ್ ಪಿ. ಹೇಳಿದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಭಾಸ್ಕರ್ ಹೆಗಡೆ, ಕೃತಿಯ ಲೇಖಕ ಸೋಮೇಶ್ವರ್ ಗುರುಮಠ್ ಉಪಸ್ಥಿತರಿದ್ದರು. ಶಿವಕುಮಾರ್ ಸ್ವಾಗತಿಸಿದರು. ವಿಜಯ್ ವಂದಿಸಿದರು. ರಕ್ಷಾ ನಿರೂಪಿಸಿದರು.

Related Posts

Leave a Reply

Your email address will not be published.