ಪಡುಬಿದ್ರಿ ವ್ಯಾಪ್ತಿಯಲ್ಲಿ ಕಡಲ ಅಬ್ಬರ: ಮೀನುಗಾರರ ಶೆಡ್, ತೆಂಗಿನ ಮರಗಳು ಕಡಲುಪಾಲು

ಮೀನುಗಾರರ ಬಹುದಿನಗಳ ಮನವಿಗೆ ಪೂರಕವಾಗಿ ಸ್ಪಂದನೆ ದೊರಕದ ಹಿನ್ನಲೆಯಲ್ಲಿ, ಇದೀಗ ಮೀನುಗಾರಿಕಾ ಸಲಕರಣಾ ಕೊಠಡಿ ಸಹಿತ ಮೂರು ತೆಂಗಿನ ಮರಗಳು ಕಡಲ ಒಡಲು ಸೇರಿದ್ದು, ಮೀನುಗಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೆಲ ದಿನಗಳಿಂದ ಪಡುಬಿದ್ರಿ ನಡಿಪಟ್ಣ ಉಮಾಮಹೇಶ್ವರಿ ಡಿಸ್ಕೋ ಫಂಡಿಗೆ ಸೇರಿದ ಸುಮಾರು ೬೦ಲಕ್ಷ ರೂಪಾಯಿ ಮೌಲ್ಯದ ಮೀನುಗಾರಿಕಾ ಸಲಕರಣೆಗಳನ್ನು ಶೇಕರಣೆ ಮಾಡಲಾಗುತ್ತಿದ್ದ ಬೃಹತ್ ಶೆಡ್ಡ್ ಇದ್ದ ಪ್ರದೇಶದಲ್ಲಿ ಕಡಲು ಕೊರೆತ ತೀವ್ರಗೊಂಡಿದ್ದು ಈ ಬಗ್ಗೆ ಜಿಲ್ಲಾಡಳಿತ ಸಹಿತ ಸ್ಥಳೀಯ ರಾಜಕಾರಣಿಗಳ ಗಮನಕ್ಕೆ ತರಲಾಗಿದ್ದು, ಸೂಕ್ತ ಕ್ರಮವನ್ನು ಕೈಗೊಂಡಿಲ್ಲ.

ಸರಿಯಾದ ಹೊತ್ತಲ್ಲಿ ಸಾಕಷ್ಟು ಕಲ್ಲುಗಳನ್ನು ಈ ಭಾಗಕ್ಕೆ ಹಾಕದೆ ಆಗೊಮ್ಮೆ ಹೀಗೊಮ್ಮೆ ಟಿಪ್ಪರ್ ಗಳಲ್ಲಿ ನಾಮ್ಕಾವಸ್ಥೆಗೊ ಎಂಬಂತ್ತೆ ತಂದು ಸುರಿದ ಪರಿಣಾಮ ಶೆಡ್ಡಿನ ಒಂದು ಗೋಡೆ ಕಡಲು ಪಾಲಾಗಿದೆ.  ಮುಂದಿನ ಸಮಯದಲ್ಲಿ ಬಹುತೇಕ ಶೆಡ್ಡು ಕಡಲ ಒಡಲು ಸೇರುವ ಮೂಲಕ ನಮಗೆ ಮೀನುಗಾರಿಕಾ ಸಲಕರಣೆ ಇಡಲು ಬೇಕಾದ ವ್ಯವಸ್ಥೆ ಇಲ್ಲವಾಗಿದೆ ಎನ್ನುತ್ತಾರೆ ಮೀನುಗಾರ ಮುಖಂಡ ಶಂಕರ್ ಬಂಗೇರ.

ಈ ಭಾಗದ ಮೂರು ತೆಂಗಿನ ಮರಗಳನ್ನು ಕಡಲು ತನ್ನೊಡಲಿಗೆ ಸೇರಿಸಿಕೊಂಡಿದ್ದು ಮತ್ತಷ್ಟು ತೆಂಗಿನ ಮರಗಳು ಸಹಿತ ಮೀನುಗಾರಿಕಾ ರಸ್ತೆಗೂ ಅಪಾಯ ಸಂಭವಿಸುವ ಸಾಧ್ಯತೆ ಇದೆ, ರಸ್ತೆ ಏನಾದರೂ ಕಡಲು ಪಾಲಾದರೆ ಪಕ್ಕದ ಐದು ವಾಸದ ಮನೆಗಳನ್ನು ಕಡಲು ಬಲಿ ಪಡೆಯುವುದರಲ್ಲಿ ಸಂಶಯವಿಲ್ಲ. ಇನ್ನೂದರೂ ತುರ್ತಾಗಿ ಕಲ್ಲು ಹಾಕುವ ಕಾರ್ಯ ವೇಗವಾಗಿ ನಡೆದರೆ ಮುಂದೆ ಸಂಭವಿಸ ಬಹುದಾದ ಬಾರೀ ಅನಾಹುತಗಳನ್ನು ತಪ್ಪಿಸು ಸಾಧ್ಯತೆ ಇದೆ ಎಂಬುದಾಗಿ ಶಂಕರ್ ಬಂಗೇರ ಹೇಳುತ್ತಾರೆ.

Related Posts

Leave a Reply

Your email address will not be published.