ಮಳೆಗೆ ತಗ್ಗು ಪ್ರದೇಶ ಜಲಾವೃತ: ಭತ್ತದ ಕೃಷಿ ನಾಶ
ಬೈಂದೂರು: ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮತ್ತು ನೆರೆಗೆ ತಾಲೂಕಿನ ಹಲವಾರು ಗ್ರಾಮಗಳ ತಗ್ಗುಪ್ರದೇಶಗಳು ನೀರಿನಲ್ಲಿ ಮುಳುಗಿದ್ದು, ಕೆಲವು ಗ್ರಾಮಗಳಲ್ಲಿ ಹಲವಾರು ಎಕರೆ ಕೃಷಿ ಭೂಮಿ ಸಂಪೂರ್ಣ ಹಾಳಾಗಿದೆ.
ಸೌಪರ್ಣಿಕ ನದಿ ನೀರಿನ ಪ್ರಮಾಣ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದ್ದು ಐದು ದಿನಗಳಿಂದ ನೆರೆ ಇಳಿಮುಖ ಕಾಣದಿರುವ ಪರಿಸ್ಥಿತಿ ಉಂಟಾದಾಗ ಭತ್ತದ ಕೃಷಿ ನಾಶವಾಗಿದೆ
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೆರೆ ಪಿಡಿತ ಗ್ರಾಮಸ್ಥರ ಗ್ರ ಆಗ್ರಹಸಿದರು.
ನಾವುಂದ ಸಾಲ್ಬುಡ, ಅರೆಹೊಳೆ, ಕಂಡಿಕೇರಿ, ಬಡಾಕೆರೆ, ಹಡವು ಪಡುಕೋಣೆ, ಮರವಂತೆ, ಕೊಂಣ್ಕಿ,ಮರವಂತೆ ಪರಿಸರದಲ್ಲಿ ಭಾರೀ ಮಳೆಯಿಂದಾಗಿ ಒಂದು ವಾರವಿಡೀ ನೆರೆ ಪರಿಸ್ಥಿತಿ ಉಂಟಾಗಿ, ಜನ ಮನೆಯಿಂದ ಹೊರಬಾರದ ಸ್ಥಿತಿ ನಿರ್ಮಾಣವಾಗಿತ್ತು. ನೆರೆಗೆ ಅಲ್ಲಿನ ನಿವಾಸಿಗರು ಅಕ್ಷರಶಃ ನಲುಗಿ ಹೋಗಿದ್ದರು. ಈ ವೇಳೆ ಅನೇಕ ಮನೆಗಳಿಗೆ ಹಾನಿಯಾಗಿದ್ದು, ಹೆಕ್ಟೇರ್‌ಗಟ್ಟಲೆ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡು, ನಾಟಿ ಮಾಡಿದ ಭತ್ತದ ಪೈರು ಕೊಳೆತು ಹೋಗಿತ್ತು. ಇಂದು ಸ್ವಲ ಮಟ್ಟಿಗೆ ನೆರೆ ಇಳಿಮುಖ ಕಂಡಿದೆ ಹೀಗೆ ಮಳೆ ಮುಂದುವರಿದರೆ ಮತ್ತೆ ಜಲ ದಿಗ್ಬಂಧನ ಮುಂದುವರೆಯು ಸಾಧ್ಯತೆ ಹೆಚ್ಚಳವಾಗಿದೆ.