HomeFresh Newsಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಜಾತ್ರೋತ್ಸವದ ಕಾರ್ಯಾಧ್ಯಕ್ಷರಾಗಿ ಶ್ರೀಶೈಲೇಂದ್ರ ಸುವರ್ಣ

ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಜಾತ್ರೋತ್ಸವದ ಕಾರ್ಯಾಧ್ಯಕ್ಷರಾಗಿ ಶ್ರೀಶೈಲೇಂದ್ರ ಸುವರ್ಣ

ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯು ಮಂಗಳೂರಿನಲ್ಲಿ ನಡೆಯಿತು.

ಫೆಬ್ರವರಿ ತಾರೀಕು 25 ರಿಂದ 28 ರ ವರೆಗೆ ನಡೆಯುವ ಜಾತ್ರಾ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಬೇಕಾದರೆ ಆಮಂತ್ರಣ ಪತ್ರಿಕೆಯನ್ನು ಪ್ರತಿಯೊಂದು ಕ್ಷೇತ್ರಕ್ಕೂ ಕಳುಹಿಸಿಕೊಡಬೇಕು ಎಂಬುದಾಗಿ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಮಯದಲ್ಲಿ ಪ್ರತಿಷ್ಠಿತ ಕಂಪೆನಿಯಾದ ಎಸ್.ಆರ್.ಆರ್ ಮಸಾಲೆಯ ಮಾಲಕರಾದ ಶ್ರೀಶೈಲೇಂದ್ರ ಸುವರ್ಣ ರವರನ್ನು ಸಮಿತಿಯ ಸರ್ವ ಸದಸ್ಯರ ಒಮ್ಮತದಿಂದ ಜಾತ್ರೋತ್ಸವದ ಕಾರ್ಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಂಕನಾಡಿ ಗರಡಿಯ ಮುಖ್ಯಸ್ಥರಾದ ಶ್ರೀ ಕೆ ಚಿತ್ತರಂಜನ್ ಕಂಕನಾಡಿ. ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಪಿತಾಂಬರ ಹೆರಾಜೆ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಶ್ರೀ ರಾಜಶೇಖರ್ ಕೋಟ್ಯಾನ್, ಎಸ್ ಆರ್ ಶೈಲೇಂದ್ರ ಸುವರ್ಣ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಯುವ ವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ಹರೀಶ್ ಪೂಜಾರಿ ಬಳೆಂಜ, ಎಂ ಜಯನಂದ ಪೂಜಾರಿ ಶ್ರೀ ಸಂತೋಷ್ ಪೂಜಾರಿ ಉಗ್ಗೇಲ್ ಬೆಟ್ಟು, ಶ್ರೀಮತಿ ಶುಭ ರಾಜೇಂದ್ರ ಪೂಜಾರಿ, ಶ್ರೀ ಜಯರಾಮ ಪೂಜಾರಿ ಸುಳ್ಯ, ಜಯರಾಮ್ ಬಂಗೇರ ಬೆಳ್ತಂಗಡಿ, ಶ್ರೀಮತಿ ವಿದ್ಯಾ ರಾಕೇಶ್, ಶೇಖರ್ ಅಮೀನ್ ಮರೋಲಿ, ಹರೀಶ ಸನಿಲ್, ಮಂಗಳೂರು. ಪೃಥ್ವಿರಾಜ್ ಎಂ ಕಂಕನಾಡಿ. ವಿಶ್ವನಾಥ್ ಕುಂದರ್ ಶಕ್ತಿನಗರ. ಕುಸುಮಾಕರ್ ಕುಂಪಲ. ಮೊದಲಾದ ಗಣ್ಯರು ಹಾಜರಿದ್ದು ಶ್ರೀ ಉಲ್ಲಾಸ್ ಕೋಟ್ಯಾನ್ ರವರು ಸ್ವಾಗತಿಸಿ ಶ್ರೀ ದೀಪಕ್ ಕೋಟ್ಯಾನ್ ಅವರು ಧನ್ಯವಾದ ಸಮರ್ಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments