ಮಿಸೆಸ್ ವರ್ಲ್ಡ್ ವೈಡ್ ಗ್ಲೋರಿ ಬ್ಯೂಟಿ ಕೀರಿಟ ವಿಜೇತೆ ಶ್ವೇತಾ ಮೌರ್ಯ

ಬೆಂಗಳೂರು ಮೂಲದ ಮೋಡೆಲ್ ಶ್ವೇತಾ ಮೌರ್ಯ ಅವರು ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ಮಿಸೆಸ್ ವರ್ಲ್ಡ್ ವೈಡ್ 2022 ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಮಿಸೆಸ್ ವರ್ಲ್ಡ್ ವೈಡ್ ಗ್ಲೋರಿ ಬ್ಯೂಟಿ ಕಿರೀಟವನ್ನು ಗೆದ್ದುಕೊಂಡಿದ್ದಾರೆ. ಸುಮಾರು 37ದೇಶಗಳ ಸ್ಪರ್ಧಿಗಳು ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಶ್ವೇತಾ ಅವರು ಕರ್ನಾಟಕದ ಹಾಗೂ ಭಾರತದ ಅನೇಕ ಜನಪರ ಕಾಳಜಿ ಹಾಗೂ ಪರಿಸರ ಕಾಳಜಿಯ ಮ್ಯಾರಥಾನ್‌ಗಳ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯೋಗ ಪಟು ಹಾಗೂ ವೆಲ್ ನೆಸ್ ಕನ್ಸಲ್ಟೆಂಟ್ ಆಗಿ ಖ್ಯಾತಿ ಪಡೆದಿರುವ ಶ್ವೇತಾ ಅವರು ಮೋಡೆಲಿಂಗ್ ಕ್ಷೇತ್ರದಲ್ಲಿ ಗೋಲ್ಡನ್ ಬುಕ್ ವರ್ಲ್ಡ್ ರೆಕಾರ್ಡ್ ಪ್ರಸಿದ್ದಿಯನ್ನು ಹೊಂದಿದವರಾಗಿದ್ದಾರೆ.

Shweta Maurya

ಸಿಂಗಾಪುರದಲ್ಲಿ ನಡೆದ ಈ ಮಿಸೆಸ್ ವರ್ಲ್ಡ್ ವೈಡ್ ಸೌಂದರ್ಯ ಸ್ಪರ್ಧೆಯ ವೇದಿಕೆಯಲ್ಲಿ ಶ್ವೇತಾ ಮೌರ್ಯ ಅವರ ಆಟೋ ಬಯೋಗ್ರಪಿ ಶ್ವೇತಾ ಮೌರ್ಯ,ಕ್ರೌನಿಂಗ್ ಫಿಟ್ನೆಸ್ , ದಿ ಗರ್ಲ್ ನೆಕ್ಸ್ಟ್ ಡೋರ್ ಅನ್ನುವ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಇದೇ ಕೃತಿಯನ್ನು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ದೇಶಗಳ ಸ್ಪರ್ಧಾಳುಗಳಿಗೆ ಪ್ರಧಾನ ಮಾಡಲಾಯಿತು.

Shweta Maurya

ಶ್ವೇತಾ ಮೌರ್ಯ ಅವರು ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮೋಡೆಲಿಂಗ್ ಹಾಗೂ ಸೌಂದರ್ಯ ಸ್ಪರ್ಧೆಯ ಕಿರೀಟ ಗೆದ್ದವರಾಗಿದ್ದಾರೆ. 2018ರಲ್ಲಿ ಪ್ರತಿಷ್ಠಿತ ಮಿಸೆಸ್ ನೀಲಗಿರೀಸ್ ಪುರಸ್ಕಾರ , 2019 ರಲ್ಲಿ ಮಿಸೆಸ್ ಇಂಡಿಯಾ ಪವರ್ ಪುಲ್ ಪ್ರಶಸ್ತಿ ಗೆದ್ದವರಾಗಿದ್ದಾರೆ. ಶ್ವೇತಾ ಮೌರ್ಯ ಅವರು ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಹಾಗೂ ಮಹಿಳಾ ಉದ್ಯಮಶೀಲತೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಜನಪರ ಕಾಳಜಿಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Related Posts

Leave a Reply

Your email address will not be published.