HomeFresh Newsಎಸ್ ಕೆ ಪೂಜಾರಿ ಅವರಿಗೆ ವಿಶ್ವಮಾನ್ಯ ಪ್ರಶಸ್ತಿ ಪ್ರದಾನ

ಎಸ್ ಕೆ ಪೂಜಾರಿ ಅವರಿಗೆ ವಿಶ್ವಮಾನ್ಯ ಪ್ರಶಸ್ತಿ ಪ್ರದಾನ

ಮಸ್ಕತ್:ಕನ್ನಡ ಸಂಘ ಮಸ್ಕತ್ ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಹಯೋಗದೊಂದಿಗೆ ಒಮಾನ್ ದೇಶದ ಮಸ್ಕತ್ ನ ಬೌಷರ್ ಸಿಬಿಎಫ್ಎಸ್ ಸಭಾಂಗಣದಲ್ಲಿ ದಿನಾಂಕ 28-11-2025 ರಂದು ಮೊನ್ನೆ ನಡೆದ “3ನೇ ವಿಶ್ವ ಕನ್ನಡ ಹಬ್ಬ” ಆಚರಣೆಯ ಯು ನಡೆಯಿತು.

ಕನ್ನಡ ಹಬ್ಬದ ಸುಸಂದರ್ಭದಲ್ಲಿ ಮಸ್ಕತ್ ನ ಹೆಸರಾಂತ ಸಮಾಜ ಸೇವಕರು, ಯಶಸ್ವಿ ಉದ್ಯಮಿಗಳು, ಶ್ರೀ ಗಣೇಶ ಫೆಸ್ಟಿವಲ್ ಮಸ್ಕತ್ ಸಮಿತಿಯ ಅಧ್ಯಕ್ಷರು, ಒಮಾನ್ ಬಿಲ್ಲವಾಸ್ ಕೂಟದ ಸ್ಥಾಪಕ ಸದಸ್ಯರು ಮತ್ತು ಮಾಜಿ ಅಧ್ಯಕ್ಷರಾದ ಶ್ರೀ ಎಸ್ ಕೆ ಪೂಜಾರಿ ಅವರು ಒಮಾನ್ ದೇಶದ ಮಸ್ಕತ್ ಮತ್ತು ಊರಿನಲ್ಲಿ ಅನೇಕ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಮಾಡಿರುವ ಸಮಾಜ ಸೇವೆಯ ಸಾಧನೆಯನ್ನು ಗುರುತಿಸಿ ಶ್ರೀಯುತರಿಗೆ ಶ್ರೀ ಮಹರ್ಷಿ ಡಾ. ಆನಂದ್ ಗುರೂಜಿ, ಶ್ರೀ ಶ್ರೀ ಬಸವ ರಮಾನಂದ ಮಹಾ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಕರ್ನಾಟಕ ವಿಧಾನ ಪರಿಷತ್ತು ಮಾನ್ಯ ಸಭಾಪತಿಗಳು ಸನ್ಮಾನ್ಯ ಶ್ರೀ ಬಸವರಾಜ್ ಶಿವಲಿಂಗಪ್ಪ ಹೊರಟ್ಟಿ, ಕರ್ನಾಟಕ ರಾಜ್ಯ ಸರ್ಕಾರದ ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರು ಸನ್ಮಾನ್ಯ ಶ್ರೀ ಕೆ ವೆಂಕಟೇಶ್, ಪೌರಾಡಳಿತ ಮತ್ತು ಹಜ್ ಇಲಾಖೆ ಸಚಿವರು ಸನ್ಮಾನ್ಯ ಶ್ರೀ ರಹೀಂ ಖಾನ್ ಮತ್ತು ಶಾಸಕರುಗಳು, ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ “ವಿಶ್ವಮಾನ್ಯ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತರಾದ ಬಿಲ್ಲವ ಸಮಾಜದ ಕಣ್ಮಣಿ ಶ್ರೀಯುತ ಎಸ್ ಕೆ ಪೂಜಾರಿ ಅವರಿಗೆ ಒಮಾನ್ ಬಿಲ್ಲವಾಸ್ ಕೂಟದ
ಅಧ್ಯಕ್ಷರು, ಸ್ಥಾಪಕ ಸದಸ್ಯರು, ಕಾರ್ಯಕಾರಿ ಸಮಿತಿ ಮತ್ತು ಸರ್ವ ಸದಸ್ಯರುಗಳ ವತಿಯಿಂದ ಅಭಿನಂದನೆಗಳನ್ನು
ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments