ದೇವಾಡಿಗ ಸಮಾಜದ ಹಿರಿಯ ಮುಂದಾಳು, ಹೋಟೆಲ್ ಉದ್ಯಮಿ ಸೋಮಪ್ಪ ಬಾಬು ದೇವಾಡಿಗ ನಿಧನ

ಶಿರ್ವ : ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸುಮಾರು 53 ವರ್ಷಗಳಿಂದ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದ ದೇವಾಡಿಗ ಸಮಾಜದ ಹಿರಿಯ ಮುಂದಾಳು,ನಾಸಿಕ್‌ ನ ಶಾರದಾ ಹೋಟೆಲ್ ನ ಮಾಲಕ ಕುತ್ಯಾರು ಕೋರ್ದೊಟ್ಟು ಸೋಮಪ್ಪ ಬಾಬು ದೇವಾಡಿಗ (94) ಅವರು ಅ. 24 ರಂದು ನಾಸಿಕ್‌ ಜಿಲ್ಲೆಯ ದೇವಲಾಲಿಯ ಸ್ವಗೃಹದಲ್ಲಿ ನಿಧನ ಹೊಂದಿದರು.

somappa babu devadiga

ಮೃತರು ಪತ್ನಿ,ನಾಲ್ವರು ಪುತ್ರರು ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ ಅವರು ಕುತ್ಯಾರು ಗ್ರಾಮದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಅವರ ನಿಧನಕ್ಕೆ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಜಿಲ್ಲಾ ಬಿಜೆಪಿ ಪ್ರ. ಕಾರ್ಯದರ್ಶಿ ಕುತ್ಯಾರು ನವೀನ್‌ ಶೆಟ್ಟಿ, ಶಿರ್ವ ಸಿ.ಎ. ಬ್ಯಾಂಕ್‌ನ ಅಧ್ಯಕ್ಷ ಕುತ್ಯಾರು ಪ್ರಸಾದ್‌ ಶೆಟ್ಟಿ ,ಕುತ್ಯಾರು ಗ್ರಾ.ಪಂ. ಅಧ್ಯಕ್ಷೆ ಲತಾ ಎಸ್‌. ಆಚಾರ್ಯ ಮತ್ತು ಕುತ್ಯಾರು ಶಾಲೆಯ ಮುಖ್ಯ ಶಿಕ್ಷಕಿ ಶರ್ಮಿಳಾ ಸಂತಾಪ ಸೂಚಿಸಿದ್ದಾರೆ.

URO HEALTH PLUS

Related Posts

Leave a Reply

Your email address will not be published.