HomeFresh Newsಮಂಗಳೂರು–ಮಡಗಾಂವ್ ಜಂಕ್ಷನ್ ನಡುವೆ ವಿಶೇಷ ರೈಲು

ಮಂಗಳೂರು–ಮಡಗಾಂವ್ ಜಂಕ್ಷನ್ ನಡುವೆ ವಿಶೇಷ ರೈಲು

ಮಂಗಳೂರು: ಮಡಗಾಂವ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಟಿಕೆಟ್ ಕಾಯ್ದಿರಿಸುವಿಕೆಗೆ ಅವಕಾಶ ಇಲ್ಲದ ವಿಶೇಷ ಮೆಮು ರೈಲು ಸೇವೆಯನ್ನು ಕೊಂಕಣ ರೈಲ್ವೆಯು ಮೂರು ದಿನಗಳ ಕಾಲ ಒದಗಿಸಲಿದೆ.

ಈ ವಿಶೇಷ ರೈಲು ಜುಲೈ 20 (ಶನಿವಾರ), 21(ಭಾನುವಾರ) ಹಾಗೂ, 22ರಂದು (ಸೋಮವಾರ) ಈ ಎರಡು ಜಂಕ್ಷನ್ ಗಳ ನಡುವೆ ಸಂಚರಿಸಲಿದೆ. ಬೆಳಗ್ಗೆ 6:00 ಮಡಗಾಂವ್ ಜಂಕ್ಷನ್ ನಿಂದ ಹೊರಡುವ ಮೆಮು ರೈಲು ಮಧ್ಯಾಹ್ನ 12:15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ಮಧ್ಯಾಹ್ನ 12:40ಕ್ಕೆ ಮಂಗಳೂರು ಜಂಕ್ಷನ್ ನಿಂದ ಹೊರಡುವ ರೈಲು ಸಂಜೆ 7:00 ಕ್ಕೆ ಮಡಗಾಂವ್ ಜಂಕ್ಷನ್ ತಲುಪಲಿದೆ. ಈ ರೈಲು ಕಾನಕೋಣ, ಕಾರವಾರ, ಹರ್ವಾಡ, ಅಂಕೋಲಾ, ಗೋಕರ್ಣ ರೋಡ್, ಮಿರ್ಜಾನ್, ಕುಮಟಾ, ಹೊನ್ನಾವರ, ಮಂಕಿ, ಮುರ್ಡೇಶ್ವರ, ಭಟ್ಕಳ, ಶಿರೂರು, ಮೂಕಾಂಬಿಕಾ ರೋಡ್ ಬೈಂದೂರು, ಬಿಜೂರು, ಸೇನಾಪುರ, ಕುಂದಾಪುರ, ಬಾರ್ಕೂರು, ಉಡುಪಿ, ಮೂಲ್ಕಿ, ಸುರತ್ಕಲ್, ತೋಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments