ಕರ್ನಾಟಕ ರಾಜ್ಯ ರೈತಸಂಘ ಸುಳ್ಯ ತಾಲೂಕು ಕಛೇರಿ ಉದ್ಘಾಟನೆ

ರೈತಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಲೋಲಾಜಾಕ್ಷ ಗೌಡ ಭೂತಕಲ್ಲು ರವರ ಆಧ್ಯಕ್ಷತೆಯಲ್ಲಿ ಸುಳ್ಯದ ಪೈಚಾರಿನಲ್ಲಿ ನೆರವೇರಿತು ಕಛೇರಿ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರು ಹಾಗೂ ಚಿಂತಕರಾದ ತೇಜಕುಮಾರ್ ಕುಡೆಕಲ್ಲು ನೇರವೇರಿಸಿ ರೈತಸಂಘಕ್ಜೆ ಅದರದೇ ಆದ ಘನತೆ ಗೌರವವಿದೆ. ವಿಧ್ಯಾರ್ಥಿ ಜೀವನದಲ್ಲಿ 80 ತ ದಶಕದ ರೈತನಾಯಕರ ಸಂಪರ್ಕದಲ್ಲಿದ್ದೆ.ಆಸಂದರ್ಭದಲ್ಲಿ ರೈತಸಂಘವೂ ಶ್ರೀ ಮಂತ ರೈತರ ಸಂಘ ಎಂಬ ಸಂಶಯವು ಜನಮಾನಸದಲ್ಲಿತ್ತು. ಪ್ರಸ್ತುತ ಸಣ್ಣ,ಅತೀಸಣ್ಣ ರೈತರು ಕೃಷಿ ಕಾರ್ಮಿಕರು ಹಾಗೂ ಸಮಾಜದ ಎಲ್ಲಾ ರೀತಿಯ ವರ್ಗದ ಜನರನ್ನೂ ಒಳಗೊಂಡಿದೆ ಮತ್ತು ರಚನಾತ್ಕಕ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ರೈತಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಂಘದ ಕಾರ್ಯಕ್ರಮದ ಹೊರತಗಿಯು ಸಮವಸ್ತ್ರ ಹಸಿರು ಟವಲ್ ಗಳನ್ನು ಧರಿಸಿಕೊಂಡು ಇತರ ರೈತರನ್ನು ಸೆಳೆಯುವಲ್ಲಿ ಮತ್ತುಒಗ್ಗೂಡಿಸುವಲ್ಲಿ ಅವಿರತ ಶ್ರಮವಹಿಸಬೇಕೆಂದು ಸಲಹೆ ನೀಡುತ್ತಾ ಪ್ರಸ್ತುತ ಭೂತಾನ್ ನಿಂದ 17000 / ಟನ್ ಹಸಿ ಅಡಿಕೆಯನ್ನು ಆಮದು ಮಾಡಲು ಅವಕಾಶ ನೀಡಿದ ಕೇಂದ್ರ ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು, ತಾಲೂಕು ಘಟಕದ ಪದಾಧಿಕಾರಿಗಳ ಕಾರ್ಯಗಳನ್ನು ಶ್ಲಾಘಿಸಿದರು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಪ್ರಾಸ್ತವಿಕವಾಗಿ ಮಾತನಾಡುತ್ತ ದೇಶದಲ್ಲಿ ಸುಮಾರು 7.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿಅಡಿಕೆಬೆಳೆಯಲಾಗುತ್ತಿದೆ ಸುಮಾರು 12ಲಕ್ಷ ಅಡಿಕೆಯನ್ನು ಉತ್ಪಾದಿಸಲಾಗುತ್ತಿದೆ ಲಕ್ಷಾಂತರ ಕುಟುಂಬಗಳು ನೇರವಾಗಿ ಮತ್ತು ಪರೋಕ್ಷವಾಗಿ ಈ ಬೆಳೆಯನ್ನು ನಂಬಿ ಜೀವನ‌ನಡೆಸುತ್ತಿದ್ದಾರೆ.

ಸುಮಾರು 6000/ ಕೋಟಿಗಿಂತಲೂ ಹೆಚ್ಚು ಆರ್ಥಿಕ ವ್ಯವಹಾರವನ್ನು ಹೊಂದಿರುವ ಬೆಳೆಯಾಗಿದೆ. ಕೇಂದ್ರ ಸರಕಾರವೂ ಬಿಳಿಗೋಟಡಿಕೆಯ ಕನಿಷ್ಠ ಆಮದು ದರವನ್ನು ಪ್ರತೀ ಕ್ವಿಂಟ್ವಾಲ್ ಗೆ ₹ 25100 ಗಳನ್ನು 2019 ರಲ್ಲಿ ನಿಗದಿ ಪಡಿಸಿತ್ತು. ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಈ ಸಾಲಿನಲ್ಲಿ ಕನಿಷ್ಠ ಪ್ರತೀ ಕ್ವಿಂಟ್ವಾಲ್ ಬಿಳಿಗೋಟಡಿಕೆಗೆ ₹40000/ ದರನಿಗದಿ ಮಾಡಲೂ ರಾಜ್ಯದ ಸಂಸದರು,ರಾಜ್ಯ ಸಭಾ ಸದಸ್ಯರು ಹಾಗೂ ರಾಜ್ಯ ಸರಕಾರ ಒಕ್ಕೂಟ ಸರಕಾರಕ್ಕೆ ಒತ್ತಡ ತರಬೇಕೆಂದು ಆಗ್ರಹಿಸಿದರು ಈ ಹಿಂದಿನ ಸಾಲುಗಳಲ್ಲಿ 5000 ದಿಂದ 6000 ಟನ್ ಅಡಿಕೆಯನ್ನು ಭೂತಾನ್ ನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು ಆದರೇ ಕೇಂದ್ರ ಸರಕಾರವೂ ಗುಟ್ಕಾ ಕಂನಪನಿಗಳಿ ಅನುಕೂಲ ಮಾಡಿಕೊಡುವಲ್ಲಿ ದೊಡ್ಡ ಪ್ರಮಾಣದ ಆಮದಿಗೆ ಒಪ್ಪಿಗೆ ನೀಡಿದ್ದೂ ಅಡಿಕೆ ಬೆಳೆಗಾರರನ್ನು ವಂಚಿಸುತ್ತಿದೆ ಮತ್ತು ಅಡಿಕೆ ಟಾಸ್ಕ್ ಪೋರ್ಸ್ ನ ಅಧ್ಯಕ್ಷರು ಹಾಗೂ ಕೇಂದ್ರ ಸರಕಾರದ ಕೃಷಿ ರಾಜ್ಯ ಸಚಿವರ ಹೇಳಿಕೆಗಳು ಬಾಲಿಷವಾಗಿವೆ ಎಂದರು. ಕಳೆದ ನಾಲ್ಕೂವರೇ ದಶಕದಿಂದ ಅಡಿಕೆ ಎಲೆ ಹಳದಿರೋಗದಿಂದ ಸಂತ್ರಸ್ತ ರೈತರ ಬಗ್ಗೆ ಕಾಳಜಿವಹಿಸದೆ ಕಾಟಚಾರಕ್ಕೆ ಎಂಬಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರಾಜ್ಯ ಕೇಂದ್ರ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡರು ಕೃಷಿ ಉತ್ಪನ್ನಗಳ ಆಮದು ಹಾಗೂ ರಫ್ತು ಗಳಿಗೆ ಸಂಭದಿಸಿದಂತೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಪುನರ್ ಪರೀಶಿಲಿಸುವ ಆಗತ್ಯವಿದೆ ಎಂದು ಆಭಿಪ್ರಾಯಿಸಿದರು ಮತ್ತು ಬೆಲೆ ಏರಿಕೆ, ಅನಾಗರಿಕ GST ಮತ್ತು ಬ್ರಹ್ಮಂಡ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಈ ಎಲ್ಲಾ ಅಂಶಗಳ ಕುರಿತು ಚಳುವಳಿ ರೂಪಿಸುವ ಇಂಗಿತ ವ್ಯಕ್ತಪಡಿಸಿದರು

ಪಾರಂಪರಿಕ ಕೃಷಿ ಹಾಗೂ ಆಧುನಿಕ ಕೃಷಿ ವಿಷಯದ ಕುರಿತು ಸಮಗ್ರ ಮಾಹಿತಿ ನೀಡಿದ ಸಾಹಿತಿ ಕೃಷಿ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ MPhil ಪಡೆದ ಎ.ಕೆ.ಹಿಮಕರ ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೃಷಿಯನ್ನು ಲಾಭದಾಯಕ ಕ್ಷೇತ್ರವಾಗಿ ಮಾರ್ಪಾಡು ಮಾಡದಿದ್ದಲ್ಲಿ ದೊಡ್ಡ ಅಪಾಯವನ್ನು ದೇಶ ಎದುರಿಸಬೇಕಾಗುವುದಲ್ಲದೆ ರೈತರು ಭೂಮಿ ಕಳಕೊಂಡರೇ ತಮ್ಮ ಆಸ್ಥಿತ್ವ ವನ್ನೇ ಕಳಕೊಂಡಂತೆ ಈ ನಿಟ್ಟಿನಲ್ಲಿ ಚಳುವಳಿಗಳು ಬಲಿಷ್ಠ ವಾದರೆ ಮಾತ್ರವೇ ಜನಸಾಮಾನ್ಯರ ಸಮಸ್ಯೆಗಳು ಮುನ್ನೆಲೆಗೆ ಬಂದು‌ಪರಿಹಾರ ಕಾಣಲು ಸಾಧ್ಯ ಎಂದರು ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ ರೈತಸಂಘವನ್ನು ಇನ್ನೂ ವಿಸ್ತರಿಸಿ ರೈತರು ,ಕಾರ್ಮಿಕರು,ಮಹಿಳೆಯರು ಹಾಗೂ ಯುವಜನತೆಯ ಐಕ್ಯ‌ಹೋರಾಟದಿಂದ ಮಾತ್ರವೇ ಬದುಕು ರೂಪಿಸಿಕೊಳ್ಳಲು ಸಾಧ್ಯ ಇದಕ್ಕೆ ನಮಗೆ ಪ್ರೇರಣೆ ಕೇಂದ್ರ ಸರಕಾರದ ಜನವಿರೋಧಿ ಕೃಷಿ‌ಮಸೂದೆಗಳನ್ನು ಹಿಮ್ಮೆಟ್ಟಿಸಲು ಸುಮಾರು545 ಕ್ಕಿಂತಲೂ ಹೆಚ್ಚು‌ಸಂಘಟನೆಗಳ‌ ಸುದೀರ್ಘ ನಿರಂತರ ವರ್ಷದ ಐಕ್ಯ ಹೋರಾಟ ಎಂದರು

ಇನ್ನೋರ್ವ ಮುಖ್ಯ ಅತಿಥಿ ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ ರೈತರಿಗೆ ಭೂಮಿ ಹಂಚಿಕೆಯಾಗುವಲ್ಲಿ ಕಾರ್ಮಿಕರ ಹೋರಾಟ ದೊಡ್ಡ ಪಾತ್ರ ಇದೆ.ಈಗಲೂ ರೈತರು ಮತ್ತು ಕಾರ್ಮಿಕರು ಒಂದದಾರೆ ಮಾತ್ರ ಗೆಲುವು ಸಾಧ್ಯ ಎಂದರು ಜಿಲ್ಲೆಯಲ್ಲಿ ರೈತರ ಧ್ವನಿಯನ್ನು ಗಟ್ಟಿಗೊಳಿಸುತ್ತಿರುವ ರೈತಸಂಘಕ್ಕೆ ಕಾರ್ಮಿಕ ಸಂಘದ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿದರುತಾಲೂಕು ಗೌರವಾಧ್ಯಕ್ಷರಾದ ನೂಜಾಲು ಪದ್ಮನಾಭ ಗೌಡ ಸ್ವಾಗತಿಸಿ ತಾಲೂಕು ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಕಾರ್ಯಕ್ರಮ‌ನಿರ್ವಹಿಸಿದರುಸಭೆಯಲ್ಲಿ ಅತಿಥಿಗಳಾಗಿ ಜಿಲ್ಲಾ ಯುವ ರೈತ ಘಟಕದ ಗೌರವಾಧ್ಯಕ್ಷರಾದ ಸುರೇಂದ್ರ ಕೋರ್ಯ,ಪ್ರಧಾನ ಕಾರ್ಯದರ್ಶಿ ಶಿವಾನಂದ್ ಬಿಸಿರೋಡ್. ಜಿಲ್ಲಾ ಉಪಾಧ್ಯಕ್ಷರಾದ ದಿವಾಕರ ಪೈ ಮಜಿಗುಂಡಿ,ಸುದರ್ಶನ್ ಕೊಯಿಂಗೋಡಿ ಉಪಸ್ಥಿತರಿದ್ದರು ಸಭೆಯಲ್ಲಿ ತಾಲೂಕು ಕೋಷಾಧಿಕಾರಿ ದೇವಪ್ಪ ಗೌಡ ಕುಂದಲ್ಪಾಡಿ,ಉಪಾಧ್ಯಕ್ಷರಾದ ತೀರ್ಥರಾಮ ಗೌಡ ಉಳುವಾರು,ಸಂಚಾಲಕರಾದ ಸೆಬಾಸ್ಟಿಯನ್ ಮಡಪ್ಪಾಡಿ,ಜತೆ ಕಾರ್ಯದರ್ಶಿ ಚೆನ್ನಕೇಶವ ಯುವ ಮುಖಂಡ ಮಂಜುನಾಥ್ ಮಡ್ತಿಲ ಸಂಪಾಜೆ ಗ್ರಾಮ ಘಟಕದ ಅಧ್ಯಕ್ಷರಾದ ವಸಂತ ಪೆಲತ್ತಡ್ಕ ಸೇರಿದಂತೆ ಹಲವಾರು ಗ್ರಾಮ ಘಟಕದ ಪದಾಧಿಕಾರಿಗಳು ಹಾಗೂ ಸಕ್ರಿಯಾ ಕಾರ್ಯಕರ್ತರು ಭಾಗವಹಿಸಿದ್ದರು

Related Posts

Leave a Reply

Your email address will not be published.