ಸುಳ್ಯ:ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆ

ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸಭೆಯು ಇಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರ ಅಧ್ಯಕ್ಷತೆಯಲ್ಲಿ ನಡೆಯಿತು.

suylya

ಸಭೆಯಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ನಂದ ಕುಮಾರ್, ಸುಳ್ಯ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕರುಣಾಕರ, ಆರೋಗ್ಯ ಇಲಾಖೆಯ ಸಹಾಯಕ ಇಂಜಿನಿಯರ್ ರಾಜೇಶ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸುನಿಲ್ ಕೇರ್ಪಳ, ಸೋಮನಾಥ ಪೂಜಾರಿ, ಗಿರೀಶ್ ಕಲ್ಲುಗದ್ದೆ, ಕೇಶವ ಮಾಸ್ಟರ್, ಸುಬ್ರಹ್ಮಣ್ಯ ಕೊಡಿಯಾಲಬೈಲ್, ದಾಮೋದರ ಮಂಚಿ, ಡಾ.ವಿದ್ಯಾ ಶಾರದೆ, ಡಾ.ಮನೋಜ್, ಜಿ.ಪಂ.ಇAಜಿನಿಯರ್‌ಗಳಾದ ಮಣಿಕಂಠ, ಜನಾರ್ಧನ್ ಉಪಸ್ಥಿತರಿದ್ದರು.

sulya

ಸಭೆಯ ನಂತರ ಸಚಿವರು ಆಸ್ಪತ್ರೆಗೆ ಮಂಜೂರುಗೊAಡ ರೂ.4.60 ಕೋಟಿ ಅನುದಾನದಲ್ಲಿ ಕೈಗೊಂಡ ಐ.ಸಿ.ಯು. ಹಾಗೂ ಆಕ್ಸಿಜನ್ ಘಟಕದ ಕಾಮಗಾರಿಗಳನ್ನು ವೀಕ್ಷಿಸಿ ಮುಂದೆ ಕೈಗೊಳ್ಳಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು.

Related Posts

Leave a Reply

Your email address will not be published.